ಪೊಲೀಸ್ ಬಂದೋಬಸ್ತ್ ನಲ್ಲಿ ಕಸ ವಿಲೇವಾರಿ

Garbage

22-08-2019

ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಬೆಳ್ಳಳ್ಳಿ ಕ್ವಾರಿಗೆ ಕಸ ಬಿಗಿ ವಿಲೇವಾರಿ ಮಾಡಲಾಗುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಬೆಳ್ಳಳ್ಳಿ ಕ್ವಾರಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ತಮಗೆ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಕಾರಣಕ್ಕಾಗಿ ಕಸ ವಿಲೇವಾರಿಗೆ ಅಡ್ಡಿಪಡಿಸಿ ಬುಧವಾರ ಪ್ರತಿಭಟನೆ ನಡೆಸಿದ್ದಲ್ಲದೆ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಕ್ವಾರಿ ಪ್ರದೇಶಕ್ಕೆ ಕಸ ವಿಲೇವಾರಿ ಮಾಡುವ ಕಸದ ಲಾರಿಗಳು ನಿಂತಲ್ಲಿ ನಿಂತು ನಗರದ ಕಸ ಸಮಸ್ಯೆ ಉಲ್ಬಣವಾಗಿತ್ತು. ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಸುಮಾರು 270 ಕ್ಕೂ ಹೆಚ್ಚು ಲಾರಿಗಳು ಕ್ವಾರಿ ಪ್ರದೇಶಕ್ಕೆ ತೆರಳಿ ಟನ್ ಗಟ್ಟಲೆ ಕಸವನ್ನು ವಿಲೇವಾರಿ ಮಾಡಿದ್ದು ಕೂಡ ಗ್ರಾಮಸ್ಥರ ಪ್ರತಿಭಟನೆ ಮುಂದುವರಿಯಲಿವೆ ಎಂಬ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಅಡಿ ಕಸವನ್ನು ಕ್ವಾರಿಗೆ ವಿಲೇವಾರಿ ಮಾಡಿದ್ದಾರೆ.

ನಗರದಲ್ಲಿ ಪ್ರತಿನಿತ್ಯ 5000 ಸಾವಿರ ಟನ್‍ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 2000 ಸಾವಿರ ಟನ್‍ಗೂ ಹೆಚ್ಚು ಮಿಶ್ರ ತ್ಯಾಜವನ್ನು ಬೆಳ್ಳಳ್ಳಿ ಕ್ವಾರಿ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ದಿನ  ಕಸ  ಕ್ವಾರಿ ಪ್ರದೇಶಕ್ಕೆ ವಿಲೇವಾರಿಯಾಗದಿದ್ದರೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಲಿದೆ.

ಗ್ರಾಮಸ್ಥರ ಪ್ರತಿಭಟನೆ ಇಂದು ಸಹ ಮುಂದುವರೆಯಬಹುದು ಎಂಬ ಹಿನ್ನೆಲೆಯಲ್ಲಿ ಸಹಾಯ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮೂವರು ಡಿಸಿಪಿಗಳು, ಐವರು ಎಸಿಪಿ, 15 ಇನ್ಸ್‍ಪೆಕ್ಟರ್‍ಗಳು ಮತ್ತು 300 ಪೊಲೀಸರು ಪ್ರತಿಭಟನ ನಡೆದ ಸ್ಥಳದಲ್ಲೇ ಬಿಡಾರ ಹೂಡಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದಾರೆ. ಪೊಲೀಸರ ಬಿಗಿ ಬಂದೋಬಸ್ತ್ ಅಡಿ ನಗರದಿಂದ ಕಸ ಹೊತ್ತು ಲಾರಿ ಒಂದರ ಹಿಂದೆ ಒಂದರಂತೆ ಕ್ವಾರಿ ಪ್ರದೇಶದತ್ತ ತೆರಳಿವೆ.


ಸಂಬಂಧಿತ ಟ್ಯಾಗ್ಗಳು

BBMP Garbage Bengaluru Waste Management


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ