ಗೆದ್ದೆತ್ತಿನ ಬಾಲ ಹಿಡಿಯುವವರೇ ಎಲ್ಲ!

Political Power

21-08-2019

ಹಣ, ಅಧಿಕಾರ, ಪ್ರಭಾವ ಇರುವೆಡೆ ಎಲ್ಲರೂ ಇರುತ್ತಾರೆ ಎನ್ನುವ ಮಾತು ರಾಜಕಾರಣದಲ್ಲಂತೂ ಅಕ್ಷರಶಃ ಸತ್ಯ. ರಾಜಕೀಯದಲ್ಲಿ ಯಾವಾಗಲೂ ಹಾವು ಏಣಿ ಆಟ ನಡೆಯುತ್ತಿರುತ್ತದೆ.

ಈ ಹಿಂದೆ ಜೆಡಿಎಸ್ - ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅಧಿಕಾರದಲ್ಲಿದ್ದವರ ಸುತ್ತ ನೂರಾರು ಜನರ ನೆರೆದಿರುತ್ತಿದ್ದರು. ಆದರೀಗ ದೋಸ್ತಿ ಸರ್ಕಾರ ಪತನವಾಗಿದೆ. ಹಿಂದೆ ಅಧಿಕಾರದಲ್ಲಿದ್ದವರು ಮನೆಗೆ ವಾಪಸ್ಸಾಗಿದ್ದಾರೆ. ಮಂತ್ರಿಗಳಾಗಿದ್ದವರು ಈಗ ಬರೀ ಶಾಸಕರಾಗಿದ್ದಾರೆ. ಇದರಿಂದಾಗಿ ಅವರ ಸುತ್ತ ನೆರೆದಿರುತ್ತಿದ್ದ ಜನರೂ ಕಡಿಮೆಯಾಗಿದ್ದಾರೆ. ಕೇವಲ ಕೆಲ ಆಪ್ತರಷ್ಟೇ ಕಂಡುಬರುತ್ತಿದ್ದಾರೆ.

ರಾಜಕೀಯ ಎನ್ನುವುದು ಚದುರಂಗದಾಟ.. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯ ಅನಿಶ್ಚಿತತೆಯಿಂದ ಕೂಡಿದ್ದು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

 


ಸಂಬಂಧಿತ ಟ್ಯಾಗ್ಗಳು

Congress JDS BJP Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ