ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತದ ಬೇಗುದಿ

Cabinet

21-08-2019

ಬೆಂಗಳೂರು: ಮಂತ್ರಿ ಮಂಡಲ ವಿಸ್ತರಣೆಯಾಗುತ್ತಿದ್ದಂತೆ ಸಚಿವ ಸ್ಥಾನ ವಂಚಿತ‌ ಆಕಾಂಕ್ಷಿಗಳು ಇದೀಗ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕತೊಡಗಿದ್ದು ಬಿಜೆಪಿ ನಾಯಕರಿಗೆ ಹೊಸ ತಲೆನೋವು ಉಂಟಾಗಿದೆ.

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಯಾವ ಕಾರಣಕ್ಕೆ ಸಿಕ್ಕಿಲ್ಲ ಎಂಬುದು ಗೊತ್ತಿಲ್ಲ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಸಿ.ಎಂ.ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ನನಗಿರಲಿಲ್ಲ. ನಾನು ಯಾರ ಬಳಿಯೂ ಮಂತ್ರಿ ಸ್ಥಾನ ಕೇಳಿರಲಿಲ್ಲ. ಮುಂದಿನ ದಿನಗಳಲ್ಲೂ ಸಚಿವ ಸ್ಥಾನ ಬೇಕೆಂದು ಕೇಳುವುದಿಲ್ಲ. ನನ್ನ ಗುರಿ ಏನಿದ್ದರೂ ಕ್ಷೇತ್ರದ ಅಭಿವೃದ್ಧಿ ಎಂದು ಸ್ಪಷ್ಟಪಡಿಸಿದರು.

ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅದು ಕೈ ತಪ್ಪಿದೆ. ಹೀಗಾಗಿ ನೋಬಾಲ್ ಗೆ ರನೌಟ್ ಆಗಿರುವುದು ನನಗೆ ಬೇಜಾರಾಗಿದೆ ಎಂದು ರಾಜೂಗೌಡ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬಹಳಷ್ಟು ಜನ ನನಗೆ ಮಂತ್ರಿ ಸ್ಥಾನ ಸಿಗಲಿ ಎಂದು ಸಹಕರಿಸಿದರು. ಅವರೆಲ್ಲರೂ ಆಸೆ ಪಟ್ಟಿದ್ದರು. ಆದರೆ ನಾನು ಸಚಿವನಾಗಲಿಲ್ಲ. ಇದರಿಂದೇನೂ ಸಮಸ್ಯೆ ಆಗಲ್ಲ. ಯಾರು ನಮಗೆ ಅಡ್ಡ ಬಂದಿದ್ದಾರೋ ಅವರ ಜೊತೆಗೆ ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಕೆಟ್ಟದು ಬಯಸಲ್ಲ ಎಂದರು.

ನಾನು ಕ್ರೀಡಾಪಟುವಾಗಿದ್ದು, ಹೀಗಾಗಿ ಆಟದಲ್ಲಿ ಸೋಲು-ಗೆಲುವು ಅನುಭವಿಸಿದ್ದೇನೆ. ಆದರೆ ಕ್ರಿಕೆಟ್ ಆಡುವಾಗ ನೋಬಾಲ್ ಗೆ ರನೌಟ್ ಆಗಿದ್ದೇನೆ ಅಂತಷ್ಟೇ ಬೇಜಾರು ಬಿಟ್ಟರೆ ಬೇರಾವುದೂ ಇಲ್ಲ. ಪರವಾಗಿಲ್ಲ ಇನ್ನೊಂದು ಮ್ಯಾಚ್ ಆಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Renukacharya Rajugowda Cabinet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ