ಯಶಸ್ವಿಯಾಗಿ ಕಕ್ಷೆ ಸೇರಿದ ಚಂದ್ರಯಾನ-2

Chandrayaana -2

20-08-2019

ಬೆಂಗಳೂರು: ಚಂದ್ರಯಾನ-2ರ ಚಂದ್ರನೌಕೆಯನ್ನು ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಿರುವ ಇಸ್ರೋ ವಿಜ್ಞಾನಿಗಳು ಸಂತಸದ ನಗೆ ಬೀರಿದ್ದಾರೆ. ನೌಕೆಯ ದ್ರವರೂಪದ ಇಂಜಿನ್ ಕೆಲಕಾಲ ದಹಿಸುವ ಮೂಲಕ  ಇಂದು ಬೆಳಿಗ್ಗೆ 8.30 ರಿಂದ 9.30ರ ಸಮಯದಲ್ಲಿ ನೌಕೆಯನ್ನು ಚಂದಿರನ ಕಕ್ಷೆಗೆ ಸೇರ್ಪಡೆಗೊಂಡಿರುವುದು ಖಾತ್ರಿಯಾದ ಕೂಡಲೇ ವಿಜ್ಞಾನಿಗಳು ಸಂತಸ ಹಂಚಿಕೊಂಡರು.

ಶಬ್ಧದ ವೇದಕ್ಕಿಂತಲೂ ವೇಗವಾಗಿ ಸುತ್ತುವ ನೌಕೆಯನ್ನು ಚಂದ್ರನ ಗುರುತ್ವಾಕರ್ಷಣೆಗೆ ಒಳಪಡಿಸುವ ಕಾರ್ಯ ಅತ್ಯಂತ ಸವಾಲಿನದಾಗಿದ್ದು, ಇದರಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ  ಬೆಳಿಗ್ಗೆ 09.02 ಸಮಯದಲ್ಲಿ ನೌಕೆಯನ್ನು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಈ ಸೇರಿಸುವ ಕಾರ್ಯ 1.738 ಸೆಕೆಂಡ್ ಹಿಡಿಯಿತು ಎಂದು ಇಸ್ರೋ ಹೇಳಿದೆ.

ನೌಕೆಯಿಂದ ಚಂದ್ರನ ಕಕ್ಷೆ ಸೇರುವ ಮೂಲಕ ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗಿ ಚಂದ್ರನ ಸುತ್ತ ಸುತ್ತಲಾರಂಭಿಸುತ್ತದೆ. ಸ್ವಯಂಚಾಲಿತವಾಗಿ ಚಂದ್ರನ ಕಕ್ಷೆಯಲ್ಲಿ ಸುತ್ತುನ ನೌಕೆಯನ್ನು ಕೆಲವು ದಿನಗಳ ನಂತರ ನೌಕೆಯ ಕಕ್ಷೆಯನ್ನು ತಗ್ಗಿಸುತ್ತ ಚಂದ್ರನ ಹತ್ತಿರ ಹತ್ತಿರದ ಕಕ್ಷೆಯಲ್ಲಿ ನೌಕೆ ಸುತ್ತುವಂತೆ ಮಾಡಲಾಗುತ್ತದೆ. ಸೆ. 2 ರಂದು ಆರ್ಬಟರ್‍ನಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳಲಿದೆ.

ಲ್ಯಾಂಡರ್ ಎತ್ತರವನ್ನು 2 ಬಾರಿ ತಗ್ಗಿಸುವ ಮೂಲಕ ಚಂದ್ರನ ಅಂಗಳದಿಂದ 100 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸುತ್ತುವಂತೆ ಮಾಡಲಾಗುತ್ತದೆ. ಸೆ. 7 ರಂದು ಲ್ಯಾಂಡರ್‍ನ್ನು ಚಂದ್ರನ ದಕ್ಷಿಣ ಧೃವದಲ್ಲಿ ನಿಧಾನವಾಗಿ ಇಳಿಸಲಾಗುತ್ತದೆ ನಂತರದಲ್ಲಿ ಲ್ಯಾಂಡರ್ ಒಳಗಿರುವ ರೋವರ್ ಹೊರಗೆ ಬಂದು 500 ಮೀ ದೂರ ಚಂದ್ರನ ಅಂಗಳದಲ್ಲಿ ಸುತ್ತಾಡಿ ಅಲ್ಲಿಯ ಮಾಹಿತಿಯನ್ನು ರವಾನಿಸುತ್ತದೆ.


ಸಂಬಂಧಿತ ಟ್ಯಾಗ್ಗಳು

Chandrayaan 2 mission ISRO Planet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ