ಟೆಲಿಫೋನ್ ಕದ್ದಾಲಿಕೆ ನಡೆದಿರೋದು ನಿಜ..!

Telephone tapping

20-08-2019

ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕದ್ದಾಲಿಕೆ ನಡೆದಿರೋದು ಅಷ್ಟೊಂದು ಗಂಭೀರವಲ್ಲದ ವಿಷಯವಾದರೂ, ಪ್ರಾಯಶಃ ಕೋರ್ಟ್ ಅದನ್ನು ಗಂಭೀರವಾಗಿ ಪರಿಗಣಿಸದೇ ಹೋದರೂ ಕದ್ದಾಲಿಕೆ ನಡೆದಿರುವುದು ನಿಜ ಎಂದು ಕಳೆದ ಬಾರಿ ಸರ್ಕಾರ ನಡೆಸಿದವರಲ್ಲಿ ಪ್ರಮುಖರು ಖಾಸಗಿಯಾಗಿ ಹೇಳಿಕೊಂಡಿದ್ದಾರೆ. ಆದರೆ ಆ ಕದ್ದಾಲಿಕೆ ಕಾನೂನು ಬಾಹಿರವಾಗಿ ಮಾಡಲಾಗಿದೆ ಎಂಬುದನ್ನು ಸಾಬೀತು ಮಾಡುವುದು ಕಷ್ಟವಾಗುತ್ತದೆ. ಹಾಗೆಯೇ ಈ ತನಿಖೆಯಿಂದ ಹೊರಬರುವ ಮಾಹಿತಿಯಿಂದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಆಪ್ತರು ಸಿಕ್ಕಿಹಾಕಿಕೊಳ್ಳುವುದು ನಿಜ ಎಂದು ಹೇಳಲಾಗುತ್ತಿದೆ.

ಈ ಕದ್ದಾಲಿಕೆ ಧ್ವನಿ ಮುದ್ರಣವನ್ನು, ಭಿನ್ನಮತೀಯರನ್ನು ಹಣಿಯಲು ಹಾಗೂ ಕೆಲವರನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸಿಕೊಳ್ಳುವ ಯೋಜನೆ ಸಿದ್ಧವಾಗಿತ್ತು. ಆದರೆ ಅವರ ದುರದೃಷ್ಟಕ್ಕೆ ಅಧಿಕಾರದಲ್ಲಿರುವವರಿಗೆ ಅಧಿಕಾರದಲ್ಲಿರುವಾಗ ಅದನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಅಲ್ಲದೇ ಕದ್ದಾಲಿಕೆಯಿಂದ ಆ ಸಂಭಾಷಣೆಗಳು ನಡೆದಿದ್ದು ನಿಜವೆಂದು ಸಾಬೀತಾದರೂ ಕೂಡ ಅದನ್ನು ಕೋರ್ಟ್ ನಲ್ಲಿ ಸಾಕ್ಷಿಯಾಗಿ ಬಳಸುವ ಸಾಧ್ಯತೆ ಇಲ್ಲವಾದ್ದರಿಂದ ಇಡೀ ಕದ್ದಾಲಿಕೆ ತನಿಖೆ ಪ್ರಕ್ರಿಯೆಯೇ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Telephone Tapping BS Yediyurappa CBI HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ