ಛಾಯಾಚಿತ್ರಗ್ರಾಹಕರಿಗೆ ಹೆಲ್ತ್ ಕಾರ್ಡ್

Health card for Photo Journalist

20-08-2019

ಬೆಂಗಳೂರು: ಉತ್ತಮ ಛಾಯಾಚಿತ್ರ ತೆಗೆಯಲು ತಮ್ಮ ಜೀವವನ್ನು ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಛಾಯಾಗ್ರಾಹಕರಿಗೆ ಹೆಲ್ತ್ ಕಾರ್ಡ್ ನೀಡಲು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್  ತಿಳಿಸಿದ್ದಾರೆ. ಜೀವವನ್ನು ಲೆಕ್ಕಿಸದೆ ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಕೆಲಸ ನಿರ್ವಹಿಸುವ ಛಾಯಾಗ್ರಾಹಕರಿಗೆ ಹೆಲ್ತ್ ಕಾರ್ಡ್ ಹಾಗೂ ಸಂಘಕ್ಕೆ ಧನಸಹಾಯ ಮಾಡಲು ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದು ಎಂದರು.

ಫೋಟೋ ಜನರ್ಲಿಸ್ಟ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಾಹಕ ದಿನಾಚರಣೆ, ಛಾಯಾಗ್ರಾಹಕರ ಸವಾಲುಗಳು ಕುರಿತ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿ ಅವರು, ಚಿತ್ರಕಲಾವಿದ ಕುಂಚದಿಂದ ವಿಭಿನ್ನ ಕಲಾಕೃತಿಗಳನ್ನು ಬಿಡಿಸಿದರೆ, ಕ್ಯಾಮರಾ ಕಣ್ಣಿಗೆ ಜಗತ್ತಿನ ವಿಸ್ಮಯ ಪ್ರಪಂಚವನ್ನೇ ಅನಾವರಣ ಮಾಡುವ ಶಕ್ತಿಯಿದೆ ಎಂದು ಹೇಳಿದರು.

ಛಾಯಾಗ್ರಾಹಕರು ತೆಗೆಯುವ ಛಾಯಾಚಿತ್ರಗಳು ಮುಂದಿನ ಪೀಳಿಗೆಯ ಸ್ಮರಣೆಗೆ ಶಾಶ್ವತವಾಗಿ ಉಳಿಯುತ್ತವೆ. ನೀವು ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಾಡುತ್ತಿರುವ ಸೇವೆ ಸಾಮಾಜದ ಏಳಿಗೆಗೆ ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆಯಿಂದ ಛಾಯಾಗ್ರಾಹಕರು ಕೆಲಸ ನಿರ್ವಹಿಸಲು ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ. ನಿಮ್ಮ ಜೀವ ಅಮೂಲ್ಯವಾಗಿದ್ದು ಆದಷ್ಟು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದರು.

ಛಾಯಾಗ್ರಾಹಕರಿಗೆ ಕೆಂಪೇಗೌಡ ಪ್ರಶಸ್ತಿ, ಹೆಲ್ತ್ ಕಾರ್ಡ್, ಸಂಘಕ್ಕೆ 20 ಲಕ್ಷ ಧನಸಹಾಯ ನೀಡುವಂತೆ ಸಂಘದ ವತಿಯಿಂದ ಮೇಯರ್ ಅವರಿಗೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಮೇಯರ್ ಭದ್ರೇಗೌಡ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಹೇಮಲತಾ ಗೋಪಾಲಯ್ಯ, ವಾಜಿದ್ ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

Journalist BBMP Photo Journalist Health Card


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ