ಬ್ಯಾಂಕ್ ನ ಚಲನ್ ನಲ್ಲಿ ಖುರಾನ್ ಸಂದೇಶ  ಕೆಲಕಾಲ ಉದ್ವಿಗ್ನ !

Kannada News

13-06-2017

 

ಮೈಸೂರು:- ರಾಷ್ಟ್ರೀಕೃತ ಬ್ಯಾಂಕಿನ ಚಲನ್ ಗಳಲ್ಲಿ ಖುರಾನ್ ಸಂದೇಶ ಕಂಡುಬಂದ ಹಿನ್ನೆಲೆಯಲ್ಲಿ ಮೈಸೂರಿನ ಶಿವಾಜಿ ರಸ್ತೆಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎನ್.ಆರ್.ಠಾಣಾ ಪೊಲೀಸರು ಘಟನೆಗೆ ಕಾರಣನಾದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಶಾಖೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕಿಗೆ ಹಣ ತುಂಬುವ ಚಲನ್ ಗಳ ಹಿಂಭಾಗದಲ್ಲಿ ಪವಿತ್ರ ಖುರಾನ್ ನ ಸಂದೇಶಗಳು ಪ್ರಿಂಟ್ ಆಗಿತ್ತು, ಪರಿಣಾಮ ಮುಸ್ಲಿಂ ಸಮುದಾಯದ ಜನತೆಯ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಂದು ಆರೋಪಿಸಿದ ಕೆಲ ಯುವಕರು ಬ್ಯಾಂಕಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಎನ್.ಆರ್.ಠಾಣೆಯ ಇನ್ಸ್ ಪೆಕ್ಟರ್  ಸಂತೋಷ್ ಹಾಗೂ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿ ಚಲನ್ ಗಳನ್ನು ಒದಗಿಸಿದ ನವೀನ್ ಕುಮಾರ್ ಎಂಬಾತನ ಜೊತೆಗೆ ಚಲನ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೈಸೂರಿನ ಕೇಂದ್ರ ಕಾರಾಗೃಹದ ಸಮೀಪ ಮಂಜುಜೋನ್ ಎಂಬ ಅಂಗಡಿಯನ್ನು ನಡೆಸುತ್ತಿದ್ದ ನವೀನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ