ಟೆಲಿಫೋನ್ ಕದ್ದಾಲಿಕೆ ಬಗ್ಗೆ ದೇವೇಗೌಡ ಹೇಳಿದ್ದೇನು?

H D Devegowda statement

19-08-2019

ಬೆಂಗಳೂರು: ಟೆಲಿಫೋನ್‍ ಕದ್ದಾಲಿಕೆ ಆರೋಪದ ಪ್ರಕರಣ ಸಿಬಿಐಗೆ ವಹಿಸುವಲ್ಲಿ ಕೇಂದ್ರ ಬಿಜೆಪಿ ಇಲ್ಲವೆ ಗೃಹ ಸಚಿವರು ಮಧ್ಯಪ್ರವೇಶ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ತೀರ್ಮಾನ ಕೈಗೊಂಡಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಇರಬಹುದೆಂದು ಯಾರ ಹೆಸರನ್ನು ಹೇಳದೆ ರಾಜಕೀಯ ಒತ್ತಡಗಳಿಗೆ ಮಣಿದು ಅವರು ಸಿಬಿಐಗೆ ವಹಿಸಿರಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವಅಮಿತ್ ಷಾ, ದೇಶದ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಅವರಿಗೆ ಕರ್ನಾಟಕದ ಸಣ್ಣಪುಟ್ಟ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಮಯವಿಲ್ಲ. ಕದ್ದಾಲಿಕೆ ಪ್ರಕರಣವನ್ನು ಮಾಧ್ಯಮಗಳಲ್ಲಿ ಇಷ್ಟೊಂದು ವಿಜೃಂಭಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ಪಕ್ಷಾಂತರ ವಿಚಾರದಲ್ಲಿ ಟೆಲಿಫೋನ್‍ಟ್ಯಾಪ್ ಮಾಡುವುದು ತಪ್ಪಲ್ಲ ಎಂದು ಪ್ರಕರಣವೊಂದರಲ್ಲಿ ಹೇಳಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್‍ ಕಮಲದ ಬಗ್ಗೆಯು ತನಿಖೆಯಾಗಲಿ ಎಂದು ಹೇಳಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಬಿಐಗೆ ಯಾವುದೇ ಪ್ರಕರಣ ಕೊಡುವುದಿಲ್ಲ ಎಂದು ಹೇಳಿದ್ದನ್ನು ಗಮನಿಸಿದ್ದೇನೆ.

ಯಡಿಯೂರಪ್ಪ ನಂತರ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಫೋನ್‍ಕದ್ದಾಲಿಕೆ ವಿಷಯವನ್ನುತನಿಖೆಗೆ ಒಳಪಡಿಸಲಿ ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆಎಂದು ಬಿಂಬಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಇಂತಹ ವಿಚಾರಗಳಿಗೆ ಒತ್ತುಕೊಡುವುದಿಲ್ಲ.

ಕುಮಾರಸ್ವಾಮಿ ಅವರು ಸಿಕ್ಕಾಕಿಕೊಂಡಿದ್ದಾರೆ ಅಂತೆಲ್ಲ ಹೇಳುತ್ತಿದ್ದಾರೆ. ಇದನ್ನೆಲ್ಲ ಮಾಧ್ಯಮಗಳಲ್ಲಿ ವಿಜೃಂಭಿಸುವುದುಅಗತ್ಯವಿಲ್ಲ ಎಂಬುದು ನನ್ನ ಭಾವನೆ. ರಾಮಕೃಷ್ಣ ಹೆಗಡೆ ಕಾಲದಿಂದ ಹಿಡಿದು, ಈಗಿನ ಮುಖ್ಯಮಂತ್ರಿಯವರೆಗೂ ಇಂಟ್ಲಿಜೆನ್ಸ್‍ಡಿಪಾರ್ಟ್‍ಮೆಂಟ್ ಅವರ ಅಧೀನದಲ್ಲೇ ಕಾರ್ಯನಿರ್ವಹಿಸುತ್ತದೆ.

ಇವರ ಕೆಲಸವೇ ಸರ್ಕಾರದ ಮತ್ತು ಜನತೆಯ ಭದ್ರತೆ ಬಗ್ಗೆ ಮಾಹಿತಿ ನೀಡುವುದು. ನಮಗೆ ಬೇಡ ಎನ್ನುವ ವಿಷಯವೂ ಮುಟ್ಟಿಸುತ್ತಾರೆ. ಅದನ್ನು ತೆಗೆದುಕೊಳ್ಳುವುದು ಬಿಡುವುದು ಅಧಿಕಾರದಲ್ಲಿದ್ದವರಿಗೆ ಸೇರಿದ ವಿಚಾರ. ಪ್ರತಿಯೊಂದು ನಾನು ಹೇಳಬಲ್ಲೆ, ಯಾರೇ ಮುಖ್ಯಮಂತ್ರಿ ಪ್ರಧಾನಿಯಾದರೂ, ಮಾಹಿತಿ ನೀಡೇ ನೀಡುತ್ತೆ. ನನಗೆ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲೂ ಇದರ ಕಾರ್ಯವೈಖರಿ ಸಂಪೂರ್ಣವಾಗಿ ತಿಳಿದಿದ್ದೇನೆ ಎಂದಿದ್ದಾರೆ.

ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನೆರೆಯ ಸಂತ್ರಸ್ಥರಿಗೆ ನನ್ನ ವೈಯುಕ್ತಿಕವಾಗಿ ಮತ್ತು ಪಕ್ಷದಿಂದ ಎಷ್ಟು ಸಾಧ್ಯವೂ ಅಷ್ಟು ಪರಿಹಾರಕೊಡಿಸಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾರ್ಯಕರ್ತರು ಸಂಗ್ರಹಿಸಿದ ದವಸ ಧಾನ್ಯಗಳನ್ನು ನಿಖಿಲ್‍ಕುಮಾರಸ್ವಾಮಿಯವರೇ ಖುದ್ದಾಗಿ ಹಂಚಿದ್ದಾರೆ. ಇನ್ನುಒಂದೆರಡು ಲಾರಿ ಸಾಮಾನುಗಳನ್ನು ಕಳುಹಿಸಿಕೊಡಲು ಗಮನ ಹರಿಸುತ್ತೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

HD Devegowda BS Yediyurappa Telephone Tapping HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ