ಅನ್ನಭಾಗ್ಯಕ್ಕೆ ಬೀಳಲಿದೆ ಕತ್ತರಿ..!

Annabhagya

17-08-2019

ಬೆಂಗಳೂರು: ಕಳೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‌ಅನ್ನಭಾಗ್ಯ ಯೋಜನೆ ಇದೀಗ‌ ರದ್ದಾಗುವ ಭೀತಿಗೆ ಸಿಲುಕಿದೆ. ಈ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಲಿದ್ದು ಹಲವು ಕುಟುಂಬಗಳು ಪಡೆಯುತ್ತಿದ್ದ ಉಚಿತ ಆಹಾರ ಧಾನ್ಯಕ್ಕೆ ಕತ್ತರಿ ಬೀಳಲಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಅಧಿಕಾರಕ್ಕೆ ಬರುತ್ತಿದ್ದಂತೆ ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರ ಸರ್ಕಾರದ ಆರು ಸಾವಿರ ರೂ.ಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ರೂ. ಹೆಚ್ಚುವರಿಯಾಗಿ ಸೇರಿಸಿ ರೈತರಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು.
ಆದರೆ ಇದೀಗ ಯಡಿಯೂರಪ್ಪ ಅವರ ಯೋಜನೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದರ ನಿವಾರಣೆಗೆ ಅನ್ನಭಾಗ್ಯಕ್ಕೆ ಕತ್ತರಿ ಹಾಕುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಯೋಜನೆ ಜಾರಿಗೆ ಈಗ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಯೋಜನೆ ಅನುಷ್ಠಾನಗೊಳ್ಳದಿದ್ದರೆ ರೈತರ ಕೆಂಗಣ್ಣಿಗೆ ಗುರಿಯಾಗುವ ಸಂದಿಗ್ಧತೆ ಎದುರಾಗಿದೆ. ಈ ಘೋಷಣೆಯಿಂದ ಸರ್ಕಾರಕ್ಕೆ 2200 ರೂ. ಹೆಚ್ಚುವರಿ ಆರ್ಥಿಕ ಹೊರೆ ಎದುರಾಗಲಿದೆ.

ಈಗಿರುವ ಸ್ಥಿತಿಯಲ್ಲಿ ಆರ್ಥಿಕ ಹೊರೆಯನ್ನು ಸರಿದೂಗಿಸುವುದು ಕಷ್ಟವಾಗುವುದರಿಂದ ಬೇರೆ ಮೂಲಗಳಿಂದ ಹಣ ಕ್ರೂಢೀಕರಿಸಬೇಕು, ಇಲ್ಲವೇ ಇರುವ ಯೋಜನೆಯ ಹಣವನ್ನು ಕಡಿತಗೊಳಿಸಬೇಕೆಂದು ಆರ್ಥಿಕ ಇಲಾಖೆ ಸಲಹೆ ನೀಡಿದೆಯಂತೆ.

ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾಗಲೇಬೇಕೆಂದರೆ ಅನ್ನಭಾಗ್ಯಕ್ಕೆ ಕತ್ತರಿ ಹಾಕುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲಾಖೆ ಮನವರಿಕೆ ಮಾಡಿಕೊಟ್ಟಿದೆ. ಅನ್ನಭಾಗ್ಯದಲ್ಲಿ ನೀಡುತ್ತಿರುವ ಎರಡು ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಬೇಳೆ ಕಡಿತ ಮಾಡಿದರೆ ಸುಮಾರು 500 ಕೋಟಿ ಇಲಾಖೆಗೆ ಉಳಿತಾಯವಾಗಲಿದೆ ಎಂದು ಬಿಎಸ್‍ವೈಗೆ ಆರ್ಥಿಕ ಇಲಾಖೆ ಸಲಹೆ ನೀಡಿದ್ದು, ಈ ಸಲಹೆಯನ್ನು ಆಧರಿಸಿ ರಾಜ್ಯ ಬಿಜೆಪಿ ಸರ್ಕಾರ ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಮುಂದಾಗಿದೆ.


ಸಂಬಂಧಿತ ಟ್ಯಾಗ್ಗಳು

Annabhagya Kisan Samman BS Yediyurappa Rice


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ