ಸಂಪುಟ ವಿಸ್ತರಣೆ : ಹೈಕಮಾಂಡ್, ಯಡಿಯೂರಪ್ಪ ಹಗ್ಗಜಗ್ಗಾಟ

Cabinet

17-08-2019

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿ ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗಿಲ್ಲ. ಈ ಬಗ್ಗೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಂಪುಟ ವಿಸ್ತರಣೆ ಗೆ ಹೈಕಮಾಂಡ್ ಅಸ್ತು ಎಂದಿದೆ.
ಇದರ ಬೆನ್ನಲ್ಲೇ ಸಂಪುಟ ಸೇರಲಿರುವ ಸಂಭಾವ್ಯ ರ ಪಟ್ಟಿ ಸಿದ್ದ ಪಡಿಸಲಾಗುತ್ತಿದೆ. ಎಲ್ಲವೂ ಸರಿಯಾದಲ್ಲಿ ಸಚಿವ ಸಂಪುಟ ಆಗಸ್ಟ್ 19 ರಂದು ವಿಸ್ತರಣೆಯಾಗಲಿದೆ. ಆದರೆ ಸದ್ಯದ ಮಾಹಿತಿ ಗಳ ಪ್ರಕಾರ ಇದು ಅಷ್ಟು ಸುಲಭವಲ್ಲ ಎನ್ನಲಾಗಿದೆ. ಇದಕ್ಕೆ ಕಾರಣವಿಷ್ಟೆ ಸಚಿವರ ಆಯ್ಕೆ ವಿಷಯದಲ್ಲಿ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಆರಂಭವಾಗಿದೆ.
ಹೈಕಮಾಂಡ್ ಗೆ ಯಡಿಯೂರಪ್ಪ ಸಲ್ಲಿಸಿರುವ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ, ಅಶ್ವಥ್ ನಾರಾಯಣಗೌಡ, ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್,ಬಾಲಚಂದ್ರಜಾರಕಿಹೊಳಿ, ಶಿವನಗೌಡ ನಾಯಕ್, ಎನ್.ರವಿಕುಮಾರ್, ಸುರೇಶ್‍ಕುಮಾರ್, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ ಅವರ ಹೆಸರುಗಳಿವೆ.
ಇದಕ್ಕೆ ಪರ್ಯಾಯವಾಗಿ ಸಂಘಪರಿವಾರದ ನಾಯಕರು ಮತ್ತು ತಮ್ಮದೆ‌ ಆದ ಜಾಲದ ಮೂಲಕ ವರದಿ ತರಿಸಿಕೊಂಡು ಹೈಕಮಾಂಡ್ ಸಿದ್ದಪಡಿಸಿರುವ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ ,ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್, ಸಿ.ಟಿ.ರವಿ, ಎಸ್.ಎ.ರವೀಂದ್ರನಾಥ್, ಅಪ್ಪಚ್ಚು ರಂಜನ್‌ ಅವರ ಹೆಸರುಗಳಿವೆ.
ಇದರ ನಡುವೆ ಇನ್ನೂ ಕೆಲವರು ತಮ್ಮ ಆಪ್ತ ನಾಯಕರ ಮೂಲಕ ಸಂಪುಟ ಸೇರಲು ಲಾಭಿ ಆರಂಭಿಸಿದ್ದಾರೆ ಇವರಿಗೆಲ್ಲಾ ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವ ನಿರ್ಧಾರ ಇದೀಗ ಅಮಿತ್ ಶಾ ಅಂಗಳ ತಲುಪಿದೆ.


ಸಂಬಂಧಿತ ಟ್ಯಾಗ್ಗಳು

Cabinet Amith Shah BS Yediyurappa Jagadish Shettar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ