ಒಂಟಿ...ಒಬ್ಬಂಟಿ ಯಡಿಯೂರಪ್ಪ...!

BS Yediyurappa

14-08-2019

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಒಬ್ಬಂಟಿಯಾಗಿದ್ದಾರೆಯೇ? ಇಂತಹದೊಂದು ಆನುಮಾನ ಕಾಡತೊಡಗಿದೆ.

ಇದಕ್ಕೆ ಕಾರಣವಿಷ್ಟೆ ರಾಜ್ಯದ 17 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿವೆ ಇಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು  ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ಥರ ಅಹವಾಲು ಆಲಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಕೇವಲ ಯಡಿಯೂರಪ್ಪ ಮಾತ್ರ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಿ.ಎಂ.ಆಗುವವರೆಗೂ ಅವರ ಹಿಂದೆ, ಮುಂದೆ ಠಳಾಯಿಸುತ್ತಿದ್ದ ಯಾವುದೇ ನಾಯಕರು ಅವರೊಂದಿಗೆ ಕಾಣಿಸುತ್ತಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಸದಾ ಅವರೊಂದಿಗೆ ಇರುತ್ತಿದ್ದ ಅವರ ಪುತ್ರ ವಿಜಯೇಂದ್ರ ಕೂಡಾ ಕಾಣಿಸುತ್ತಿಲ್ಲ. ಅವರ ಆಪ್ತವಲಯದಲ್ಲಿ ಸದಾ ಕಾಣಿಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇವುಗಳನ್ನ ಗಮನ್ಸಿದಾಗ ಯಡಿಯೂರಪ್ಪ ಒಂಟಿಯಾದರಾ... ಎಂಬ ಸಂದೇಹ ಮೂಡುತ್ತದೆ.

ಹೈಕಮಾಂಡ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಂಪುಟ ವಿಸ್ತರಣೆ ಸಾಧ್ಯವಾಗಿಲ್ಲ. ಆದರೂ ಹಲವು ಇಲಾಖೆಗಳಲ್ಲಿ ನಡೆದ ವರ್ಗಾವಣೆ, ವಿವಿಧ ಕಾಮಗಾರಿಗಳಿಗೆ ದೊರೆತ ಆಡಳಿತಾತ್ಮಕ ಮಂಜೂರಾತಿ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಮುಖ್ಯಮಂತ್ರಿ ತಮ್ಮ ಬಳಿ ಯಾವ ಖಾತೆ ಇಟ್ಟುಕೊಳ್ಳುತ್ತಾರೋ ತಿಳಿದಿಲ್ಲ, ಆದರೆ ಎಲ್ಲಾ ಖಾತೆಗಳಲ್ಲೂ ತೆಗೆದುಕೊಳ್ಳುತ್ತಿರುವ ಆಡಳಿತಾತ್ಮಕ ನಿರ್ಧಾರಗಳು ಅದರಲ್ಲೂ ಪ್ರಮುಖವಾಗಿ ದೊಡ್ಡ ಪ್ರಮಾಣದ ಹಣಕಾಸು ಮುಖ್ಯವಾಗಿರುವ ನಿರ್ಧಾರಗಳನ್ನು ಸಂಪುಟದ ಅನುಮೋದನೆಯಿಲ್ಲದೆ ಮುಖ್ಯಮಂತ್ರಿಗಳ ನಿವಾಸದಿಂದ ಹೊರಬೀಳುತ್ತಿರುವ ಆದೇಶಗಳು ಹಲವು ಪ್ರಮುಖ ನಾಯಕರ ಅಸಮಧಾನಕ್ಕೆ ಕಾರಣವಾಗಿದೆ.

ಅದರಲ್ಲೂ ಇನ್ನೇನು ಸಂಪುಟಕ್ಕೆ ಸೇರುತ್ತೇವೆಂದುಕೊಂಡಿದ್ದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಅಶೋಕ್, ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಹಲವರು ಯಡಿಯೂರಪ್ಪ ನಿವಾಸದಿಂದ ಹೊರಬೀಳುತ್ತಿರುವ ಈ ಆದೇಶಗಳಿಂದ ಬೇಸರಗೊಂಡಿದ್ದಾರೆ. ಅಲ್ಲದೆ ಈ ಎಲ್ಲಾ ನಿರ್ಧಾರಗಳ ಕುರಿತು ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಇದರ ಪರಿಣಾಮ ಸಂಪುಟ ವಿಸ್ತರಣೆಯಗುವವರೆಗೆ ಯಾವುದೇ ಪ್ರಮುಖ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ಹೈಕಮಾಂಡ್ ಯಡಿಯೂರಪ್ಪ ಆವರಿಗೆ ತಾಕೀತು ಮಾಡಿದೆ. ಅಲ್ಲದೆ ಪ್ರಮುಖ ನಿರ್ಧಾರಗಳ ಹಿಂದೆ ವಿಜಯೇಂದ್ರ ಪಾತ್ರವಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅವರನ್ನು ಆಡಳಿತಾತ್ಮಕ ಪ್ರಕ್ರಿಯೆಗಳಿಂದ ದೂರವಿಡುವಂತೆ ಸೂಚಿಸಿದ್ದಾರೆ.ಹೀಗಾಗಿ ಇತ್ತೀಚೆಗೆ ವಿಜಯೇಂದ್ರ ತಮ್ಮ ತಂದೆಯ ಜೊತೆ ಕÁಣಿಸುತ್ತಿಲ್ಲ ಸರ್ಕಾರ ರಚನೆಯ ಸಮಯದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಸಲಹೆಗಳನ್ನು ಕೇಳುತ್ತಿದ್ದ ಯಡಿಯೂರಪ್ಪ ವರ್ಗಾವಣೆ ಸೇರಿ ಆಡಳಿತಾತ್ಮಕ ನಿರ್ಧಾರಗಳನ್ನು ಎಕಪಕ್ಷೀಯವಾಗಿ ತೆಗೆದುಕೊಂಡಿದ್ದರಿಂದ ಇವರೆಲ್ಲಾ ಇದೀಗ ಅವರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದು ಯಡಿಯೂರಪ್ಪ ಒಂಟಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BS Yediyurappa Flood BJP Shobha Karadlaje


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ