ಈ ಬಾರಿ ಅಧಿಕಾರಿಗಳಿಂದಲೇ ಧ್ವಜಾರೋಹಣ!

Independence day

13-08-2019

ಬೆಂಗಳೂರು: ರಾಜ್ಯ ಪ್ರವಾಹದಿಂದ ತತ್ತರಿಸಿರುವ ಬೆನ್ನಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವ ಸರ್ಕಾರ ಅದೇ ಕಾಲಕ್ಕೆ ಸಚಿವರ ಉಪಸ್ಥಿತಿಯಿಲ್ಲದೆ ಇರುವುದರಿಂದ ಅಧಿಕಾರಿಗಳೇ ಅಂದು ಧ್ವಜಾರೋಹಣ ಕಾರ್ಯ ನಡೆಸಲು ಸಿಗ್ನಲ್ ನೀಡಿದೆ.

ಈ ಸಂಬಂಧ ಅಧಿಕೃತ ಆದೇಶ ಹೊರಟಿದ್ದು ಅಗಸ್ಟ್ 15 ರಂದು ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಗಳ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್‍ಗಳು ಧ್ವಜಾರೋಹಣ ಕಾರ್ಯ ನಡೆಸುವಂತೆ ಆದೇಶಿಸಲಾಗಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಹದಿನೆಂಟು ದಿನ ಹಾಗೂ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಿ ಹದಿನಾರು ದಿನಗಳಾದರೂ ಇದುವರೆಗೆ ಯಡಿಯೂರಪ್ಪ ಅವರ ಸರ್ಕಾರ ಒನ್‍ಮ್ಯಾನ್ ಷೋ ಸರ್ಕಾರವಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನಗಳಾದರೂ ಮಂತ್ರಿ ಮಂಡಲವನ್ನೇ ವಿಸ್ತರಣೆ ಮಾಡದೆ ಏಕಾಂಗಿಯಾಗಿ ದಾಖಲೆ ಬರೆದಿರುವ ಯಡಿಯೂರಪ್ಪ ಇದೀಗ ಅನಿವಾರ್ಯವಾಗಿ, ಸರ್ಕಾರವಿದ್ದರೂ ಅಧಿಕಾರಿಗಳಿಗೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವಂತೆ ಸೂಚಿಸುವಂತಾಗಿದೆ.

ಸರ್ಕಾರ ರಚಿಸಲು ಪೂರಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅನರ್ಹಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರಿಂದ ಅವರ ವಿವಾದ ಇತ್ಯರ್ಥವಾಗಲಿ ಎಂದು ಕಾದ ಯಡಿಯೂರಪ್ಪ ತಮ್ಮ ಜತೆ ಉಳಿದವರ್ಯಾರನ್ನೂ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲಿಲ್ಲ.


ಸಂಬಂಧಿತ ಟ್ಯಾಗ್ಗಳು

Independence day BS Yediyurappa Minister Cabinet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ