ಈ ಭಾಗಗಳಲ್ಲಿ KSRTC ಬಸ್ ಸಂಚಾರ ಪುನಾರಂಭ

KSRTC

12-08-2019

ಬೆಂಗಳೂರು: ಮಳೆಯ ಆರ್ಭಟ ಪ್ರವಾಹ ಕಡಿಮೆಯಾಗಿರುವುದರಿಂದ  ಶಿವಮೊಗ್ಗ, ಮೈಸೂರು, ಮತ್ತಿತರ ಜಿಲ್ಲೆಗಳಲ್ಲಿ ಕಳೆದ 5 - 6 ದಿನಗಳಿಂದ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಪುನರಾರಂಭಿಸಲಾಗಿದೆ. ರಸ್ತೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಬಸ್‍ಗಳ ಸಂಚಾರ ಸೋಮವಾರದಿಂದ ಆರಂಭಗೊಂಡಿದ್ದು ಶಿವಮೊಗ್ಗ, ತೀರ್ಥಹಳ್ಳಿ ಮೂಲಕ ಮಂಡಗದ್ದೆ ರಸ್ತೆ ಸುಗಮವಾಗಿದ್ದು, ಆ ರಸ್ತೆ ಮೂಲಕ ಶಿವಮೊಗ್ಗ, ತೀರ್ಥಹಳ್ಳಿ ಪಟ್ಟಣಗಳಿಗೆ ಸಾರಿಗೆ ಸಂಸ್ಥೆ ಬಸ್‍ಗಳು ಪುನರಾರಂಭಗೊಂಡಿವೆ.

ಕಬಿನಿ ಜಲಾಶಯದ ನೀರಿನ ಹರಿವು ಹೆಚ್ಚು ಇರುವುದರಿಂದ ಮೈಸೂರು, ಉಲ್ಲಹಳ್ಳಿ, ನಂಜನಗೂಡು ರಸ್ತೆಯನ್ನು ಬಂದ್ ಮಾಡಿರುವುದರಿಂದ ಆ ಮಾರ್ಗದಲ್ಲಿ ಬಸ್ ಸೇವೆಯನ್ನು ರದ್ದುಪಡಿಸಲಾಗಿದೆ.

ಮೈಸೂರು - ನಂಜನಗೂಡು ಮತ್ತು ಮೈಸೂರು - ಸುತ್ತೂರು ರಸ್ತೆಗಳನ್ನು ಪುನರಾರಂಭಿಸಿಲ್ಲ. ತೀರ್ಥಹಳ್ಳಿ - ಮಂಡಗದ್ದೆ ಮೂಲಕ ಉಡುಪಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಇನ್ನೂ ಕೆಲವು ಭಾಗಗಳಲ್ಲಿನ ರಸ್ತೆಗಳಲ್ಲಿನ ನೀರು ಪೂರ್ಣಪ್ರಮಾಣದಲ್ಲಿ ತೆರವಾದ ಬಳಿಕ ಈ ಜಿಲ್ಲೆಗಳ ಮಾರ್ಗಗಳಲ್ಲಿ ಬಸ್‍ಗಳನ್ನು ಓಡಿಸಲಾಗುವುದು ಎಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ರಸ್ತೆಯಲ್ಲಿ ನೀರು ನಿಂತು ಕುಶಾಲನಗರದ ಸಮೀಪ ನಿಂತುಹೋಗಿದ್ದ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಅಲ್ಲಿಂದ ಬೆಳಿಗ್ಗೆ ಪ್ರಯಾಣ ಆರಂಭಿಸಿದೆ.


ಸಂಬಂಧಿತ ಟ್ಯಾಗ್ಗಳು

KSRTC Heavy Rain Shivmogga Flood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ