ಮಹಿಳೆಯ ಕಿವಿಯೊಳಗಿಂದ ಹೊರ ಬಂತು 8 ಕಾಲಿನ ಜೇಡ !

Kannada News

12-06-2017

 ಬೆಂಗಳೂರು:- ಜಿರಳೆ ಕಂಡರೆ ಮಹಿಳೆಯರು ಮಾರುದ್ಧ ಓಡುವ ಪರಿಸ್ದಿತಿ ಇರುವಾಗ ಜೇಡವೊಂದು ಮಹಿಳೆಯೊಬ್ಬರ ಕಿವಿಯೊಳಗೆ ಹೊಕ್ಕಿ ಗೂಡು ಕಟ್ಟಿದರೆ ಹೇಗಾಗಬೇಡ. ಇಂತಹದ್ದೊಂದು ಅಚ್ಚರಿಯ ಘಟನೆ ನಗರದಲ್ಲಿ ನಡೆದಿದೆ. ಹೆಬ್ಬಾಳದ ಲಕ್ಷ್ಮೀ ಎಂಬವರಿಗೆ ಇತ್ತೀಚೆಗೆ ತೀವ್ರ ತಲೆನೋವು ಹಾಗೂ ಕಿವಿಯೊಳಗೆ ಕಿರಿಕಿರಿ ಆಗುತ್ತಿದ್ದರಿಂದ ಪರೀಕ್ಷೆ ಮಾಡಿಸಲು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಅಂತೆಯೇ ವೈದ್ಯರು ಕಿವಿಯನ್ನು ಪರೀಕ್ಷಿಸಿದಾಗ 8 ಕಾಲಿನ ಜೇಡವೊಂದು ಕಿವಿಯೊಳಗಿಂದ ನಿಧಾನವಾಗಿ ಹೊರ ಬರುತ್ತಿರುವುದು ಕಂಡಿದ್ದಾರೆ. ಇದನ್ನು ನೋಡಿ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ. ಇದರ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, 49 ವರ್ಷದ ಲಕ್ಷ್ಮೀ ಮಧ್ಯಾಹ್ನ ತನ್ನ ಕೆಲಸ ಮಗಿಸಿ ಮನೆಯ ವರಾಂಡದಲ್ಲಿ ಮಲಗಿದ್ದರು. ಕೆಲ ಹೊತ್ತು ಮಲಗಿ ಎದ್ದ ತಕ್ಷಣ ಅವರಿಗೆ ವಿಪರೀತ ತಲೆನೋವು ಹಾಗೂ ಬಲಭಾಗದ ಕಿವಿಯೊಳಗೆ ಕಿರಿಕಿರಿಯ ಅನುಭವವಾಗಿತ್ತು. ಅಂತೆಯೇ ಕಿವಿಯೊಳಗೆ ಏನು ಸೇರಿಕೊಂಡಿರಬೇಕು ಅಂತಾ ಉಜ್ಜಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲಿಲ್ಲ. ಅಲ್ಲದೇ ತಲೆನೋವು ಜೋರಾಗಲು ಆರಂಭವಾಯಿತು. ತಕ್ಷಣ ಲಕ್ಮೀ ನಗರದಲ್ಲಿರೋ ಆಸ್ಪತ್ರೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಲೆಂದು ಕಿವಿಯೊಳಗೆ ಲೈಟ್ ಹಾಕುತ್ತಿದ್ದಂತೆಯೇ ಜೇಡ ಹೊರಬಂದಿದ್ದು, ಲಕ್ಷ್ಮೀ ಅಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪವಾಗಿ ನಡೆಯುತ್ತವೆ. ಹೀಗಾಗಿ ಜೇಡ ಹೊರಬರುವುದನ್ನು ಕಂಡು ನಾನೇ ಒಂದು ಬಾರಿ ದಂಗಾದೆ ಎಂದು ಲಕ್ಷ್ಮೀ ಯನ್ನು ಪರೀಕ್ಷಿಸಿದ ವೈದ್ಯ ಡಾ. ಸಂತೋಷ್ ಶಿವಸ್ವಾಮಿ ಹೇಳಿದ್ದಾರೆ. ಅಂದಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ