ಚಿತ್ರ ವಿಮರ್ಶೆ: ಜಬಾರಿಯಾ ಜೋಡಿ

Jabariya Jodi: Film Review

12-08-2019

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಪರಿಣಿತಿ ಚೋಪ್ರಾ ನಟನೆಯ ಜಬಾರಿಯಾ ಜೋಡಿ ಮೊನ್ನೆ ಬಿಡುಗಡೆಯಾಗಿದ್ದು ಸಾಧಾರಣ ಪ್ರದರ್ಶನ ಕಾಣುತ್ತಿದೆ. ಬಾಲಾಜಿ ಮೋಷನ್ ಪಿಕ್ಟರ್ ಬ್ಯಾನರ್ ನ ಈ ಚಿತ್ರಕ್ಕೆ ಪ್ರಶಾಂತ್ ಸಿಂಗ್ ಆ್ಯಕ್ಷನ್ ಕಟ್ ಹೇಳಿದ್ದು, ಎಕ್ತಾ ಕಪೂರ್, ಶೋಭಾ ಕಪೂರ್ ಹಾಗೂ ಶೈಲೇಶ್ ಸಿಂಗ್ ನಿರ್ಮಾಣ ಮಾಡಿದ್ದಾರೆ.

ಬಿಹಾರದಲ್ಲಿ ನಡೆಯುವ ವರನ ಅಪಹರಣ ಕಥೆಯನ್ನಾಧರಿಸಿದ ಚಿತ್ರದಲ್ಲಿ ಕೆಲವೊಂದು ದೃಶ್ಯಗಳಷ್ಟೇ ವೀಕ್ಷಕರಿಗೆ ಇಷ್ಟವಾಗುತ್ತೆ. ಇನ್ನು ಉತ್ತಮ ನಿರ್ಮಾಣ ಮೌಲ್ಯ ಜೊತೆಗೆ ಪರಿಣಿತಿ ಚೋಪ್ರಾ ಕಾಸ್ಟ್ಯೂಮ್ಸ್ ಚಿತ್ರದ ಪ್ಲಸ್ ಪಾಯಿಂಟ್.

ಇನ್ನು ಎಲ್ಲಾ ಕಲಾವಿದರ ನಟನೆ ಅಷ್ಟಕ್ಕಷ್ಟೇ. ಇದು ಬಿಹಾರದ ಕಥೆಯಾದ್ದರಿಂದ ಪರಿಣಿತಿ ಚೋಪ್ರಾ ಕಾಸ್ಟ್ಯೂಮ್ ಗೂ ಅಲ್ಲಿನ ನೈಜ ಚಿತ್ರಣಕ್ಕೂ ಹೋಲಿಕೆಯಾಗುತ್ತಿಲ್ಲ. ಹೀಗಾಗಿ ಚಿತ್ರ ವೀಕ್ಷಕರ ಮನಸ್ಸಿಗೆ ನಾಟಿಲ್ಲ. ಜೊತೆಗೆ ವೀಕ್ಷಕರ ಮನಮುಟ್ಟುಲು ನಿರ್ದೇಶಕ ಪ್ರಶಾಂತ್ ಸಿಂಗ್ ವಿಫಲರಾಗಿದ್ದಾರೆ. ಇವಿಷ್ಟು ಚಿತ್ರದ ಮೈನಸ್ ಪಾಯಿಂಟ್ಸ್.


ಸಂಬಂಧಿತ ಟ್ಯಾಗ್ಗಳು

Siddharth Malhotra Pariniti Chopra Bollywood Jabariya Jodi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ