ಕಾಂಗ್ರೆಸ್, ಜೆಡಿಎಸ್ ವಿರುದ್ಧ ರೇಣುಕಾಚಾರ್ಯ ಕಿಡಿ

Renukacharya statement

08-08-2019

ಬೆಂಗಳೂರು: ಅಧಿಕಾರದಲ್ಲಿದ್ದಾಗ ವಿಧಾನಸೌಧಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ, ಸಹೋದರನ ಜತೆಗೂಡಿ ವಾಮಾಚಾರ ಮಾಡಿಸುವುದರಲ್ಲಿ ತಲ್ಲೀನರಾಗಿದ್ದ ಕುಮಾರಸ್ವಾಮಿ ಈಗ ಜನನಾಯಕ ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಹೊಂದಿಲ್ಲ ಎಂದು ಬಿಜೆಪಿ ನಾಯಕ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಆಡಳಿತ ಪಕ್ಷದ ಶಾಸಕಾಂಗ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಧಾನಸೌಧಕ್ಕೆ ಸೀಮಿತರಾಗಿದ್ದರು.ಆದಾಗ ಮೈಸೂರಿಗೆ ಹೋಗುತ್ತಿದ್ದರು.ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರೇ ಇವರನ್ನು ತಿರಸ್ಕರಿಸಿದರು ಎಂದರು.

ಇವರೀಗ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ.ಎಲ್ಲಿದೆ ಸಚಿವ ಸಂಪುಟ ಎಂದು ಕೂಗುತ್ತಾರೆ.ಹಲ ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆ ತಡವಾಗಿರಬಹುದು.ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಯಾವ ಹಿನ್ನಡೆಯೂ ಆಗಿಲ್ಲ.

 

ಯಡಿಯೂರಪ್ಪ ಅವರೇನೂ ದಿಲ್ಲಿಗೆ ಹೋಗಿ ಸುಮ್ಮನೆ ಕೂತಿರಲಿಲ್ಲ.ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.ವಿವಿಧ ಇಲಾಖೆಗಳ ಮಂತ್ರಿಗಳನ್ನು ಭೇಟಿಯಾಗಿ ರಾಜ್ಯಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.

ಇದರ ಮಧ್ಯೆ ಪ್ರವಾಹಪೀಡಿತ ಜನರ ಸಂಕಷ್ಟಗಳನ್ನು ಖುದ್ದಾಗಿ ಹೋಗಿ ಆಲಿಸಿದ್ದಾರೆ.ಅವರ ಸಮಸ್ಯೆಯ ಪರಿಹಾರಕ್ಕೆ ಅಗತ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ.ಹೀಗಿರುವಾಗ ಸಿದ್ಧರಾಮಯ್ಯ,ಕುಮಾರಸ್ವಾಮಿ,ದಿನೇಶ್ ಗುಂಡೂರಾವ್ ಅವರಂತಹ ನಾಯಕರಿಗೆ ಮಾತನಾಡಲು ಯಾವ ಹಕ್ಕೂ ಇಲ್ಲ ಎಂದರು.

ಇವತ್ತು ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ಧರಾಮಯ್ಯ ಅವರಿಗೆ ತಮ್ಮ ಕ್ಷೇತ್ರವೂ ಪ್ರವಾಹಪೀಡಿತವಾಗಿದೆ ಎಂಬುದು ಗೊತ್ತಿಲ್ಲವೇ?ಅವರು ಕೂಡಾ ಕಾಂಗ್ರೆಸ್ ನಾಯಕರಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬಹುದಿತ್ತಲ್ಲ?ಎಂದು ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

Renukacharya BJP HD Kumaraswamy Siddaramaiah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ