ಹಬ್ಬ ಬಂತೆಂದರೆ ಬಸ್ ಗಳಿಗೆ ಸುಗ್ಗಿ

Private bus

07-08-2019

ಶ್ರಾವಣ ಮಾಸ ಆರಂಭವಾಗಿದೆ. ಇನ್ನೇನು ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇದೆ. ವರಮಹಾಲಕ್ಷ್ಮೀ ಹಬ್ಬದ ಜೊತೆ ಸಾಲು ಸಾಲು ರಜೆಗಳೂ ಆರಂಭವಾಗುತ್ತಿವೆ. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಾದರೆ ಬರುವುದು ವೀಕೆಂಡ್. ಬಹುತೇಕರಿಗೆ ಶನಿವಾರ ಹಾಗೂ ಭಾನುವಾರ ರಜೆ. ಇನ್ನು ಸೋಮವಾರ ಬಕ್ರೀದ್ ಇರೋದ್ರಿಂದ ಮತ್ತೆ ಸರ್ಕಾರಿ ರಜೆ ಇದೆ. ಮತ್ತೆರಡು ದಿನ ಕಳೆದರೆ ಸ್ವಾತಂತ್ರ್ಯ ದಿನಾಚರಣೆ. ಅಂದೂ ಕೂಡ ಸರ್ಕಾರಿ ರಜೆ. ಹೀಗೆ ಸಾಲು ಸಾಲು ರಜೆ ಇರೋದ್ರಿಂದ ಸಾಕಷ್ಟು ಜನರು ಒಂದೆಡೆದು ದಿನ ರಜೆ ಹಾಕಿ ಊರಿನತ್ತ ಮುಖ ಮಾಡಿದ್ದಾರೆ.

ಇವೆಲ್ಲದರ ಮಧ್ಯೆ ಖಾಸಗಿ ಬಸ್ ದರ ದುಪ್ಪಟ್ಟಾಗಿರುವುದು ಜನಸಾಮಾನ್ಯರನ್ನು ಕಂಗೆಡಿಸಿದೆ. ಸಾಲು ರಜೆಯ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಲ್ಲಿರುವ ದರದ ದುಪ್ಪಟ್ಟು ದರ ಹೇಳಲಾಗುತ್ತಿದೆ. ಮಹಾನಗರದಿಂದ ಊರಿಗೆ ತೆರಳುವುದು ಹಾಗೂ ಊರಿನಿಂದ ಮರಳಿ ಬರುವ ಟಿಕೆಟ್ ದರವನ್ನು ದುಪ್ಪಟ್ಟು ಏರಿಸಲಾಗುತ್ತಿದೆ. ಜನಸಾಮಾನ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಏನು ಮಾಡಲಾಗದ ಅಸಹಾಯಕರು. ಈ ನಿಟ್ಟಿನಲ್ಲಿ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Private bus Weekend Heavy rain Varamahalakshmi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ