ಪ್ರವಾಹದಲ್ಲಿ ಕೊಚ್ಚಿ ಹೋದ ಸಂಪುಟ ವಿಸ್ತರಣೆ!

BS Yediyurappa

07-08-2019

ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಯಶಸ್ತಿಯಾಗಿ 15 ದಿನ ಅಧಿಕಾರವಧಿ ಪೂರ್ಣಗೊಳಿಸಿದ್ದಾರೆ. ರಾಜ್ಯದ ಆಡಳಿತ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ಮಂತ್ರಿಗಳಿಲ್ಲದ ಏಕೈಕ ಮುಖ್ಯಮಂತ್ರಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಹಲವು ಸುತ್ತಿನ ಕಸರತ್ತಿನ ಬಳಿಕ ಸಂಪುಟ ವಿಸ್ತರಣೆಗೆ ಮುಂದಾದ ಯಡಿಯೂರಪ್ಪ, ಸಂಭಾವ್ಯ ಮಂತ್ರಿಗಳ ಪಟ್ಟಿಯೊಂದಿಗೆ ವರಿಷ್ಠರ ಅನುಮೋದನೆಗಾಗಿ ದೆಹಲಿಗೆ ತೆರಳಿದ್ದರು. ಪಕ್ಷದ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅನುಮತಿ ಕೋರಿದರು. ಆದರೆ ಪಕ್ಷದ ವರಿಷ್ಠರ ಮಂಡಳಿ ಇದಕ್ಕೆ ಅನುಮತಿ ನೀಡಲು ನಿರಾಕರಿಸಿತು. ರಾಜ್ಯದ ಉತ್ತರ ಮತ್ತು ಮಲೆನಾಡು ಪ್ರದೇಶ ಅತಿವೃಷ್ಠಿಗೆ ಸಿಲುಕಿ ತತ್ತರಿಸಿದೆ. ಇಂಥ ಸಮಯದಲ್ಲಿ ಸಂಪುಟ ವಿಸ್ತರಣೆಯಂಥ ಸಂಭ್ರಮಾಚರಣೆ ಬೇಡ. ತಕ್ಷಣವೇ ಬೆಂಗಳೂರಿಗೆ ತೆರಳಿ, ಪರಿಹಾರ ಕಾರ್ಯದಲ್ಲಿ ತೊಡಗುವಂತೆ ಸೂಚಿಸಿದ್ದಾರೆ. ಹೀಗಾಗ ಯಡಿಯೂರಪ್ಪ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ವರಿಷ್ಠರ ಈ ನಿರ್ಧಾರ ಮಂತ್ರಿಯಾಗುವ ಕನಸು ಕಾಣುತ್ತಿದ್ದ ಹಲವರ ಆಸೆಯನ್ನು ಪ್ರವಾಹದಲ್ಲಿ ಕೊಚ್ಚಿ ಹೋಗುವಂತೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa J P Nadda Amith Shah Delhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ