‘ಭಾರತದ ತಲೆಯನ್ನು ಕತ್ತರಿಸಲಾಗಿದೆ’

Oppositions statement

05-08-2019

ದೆಹಲಿ: ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಭಿನ್ನವಾಗಿರುವ ಕಾರಣಕ್ಕೆ 370 ಅನ್ನು ಅನ್ವಯಿಸಲಾಗಿತ್ತು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಈ ಮೂಲಕ ಕಾಶ್ಮೀರ ವಿಷಯದಲ್ಲಿ ಕೇಂದ್ರದ ನಿಲುವನ್ನು ಅವರು ವಿರೋಧಿಸಿದ್ದಾರೆ. ಅಧಿಕಾರದಿಂದ ಮತ್ತರಾಗಿ ಮತ್ತು ಮತಕ್ಕಾಗಿ ಬಿಜೆಪಿ ಸರ್ಕಾರ 3-4 ಅಂಶಗಳನ್ನು ರದ್ದುಪಡಿಸಿದೆ. ಅವರು ದೇಶದ ತಲೆಯನ್ನೇ ಕತ್ತರಿಸಿದ್ದಾರೆ. ರಾಜಕೀಯ ಪಕ್ಷಗಳು ಇದರ ವಿರುದ್ಧ ಹೋರಾಡುತ್ತವೆ ಮತ್ತು ಜಮ್ಮು ಕಾಶ್ಮೀರದೊಂದಿಗೆ ನಿಲ್ಲುತ್ತವೆ ಎಂದು ಅವರು ಹೇಳಿದರು.

ಭಾರತ ಸರ್ಕಾರ ಕಣಿವೆ ರಾಜ್ಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ದುರಾದೃಷ್ಟಕರ ಸಂಗತಿ ಎಂದರೆ ಸರ್ಕಾರ ಇದನ್ನು ಮಾಡಿಲ್ಲ. ಇದರ ನಡುವೆ ಅವರು ಸಂವಿಧಾನದ 370, 35ಎಯನ್ನು ಹಿಂಪಡೆದಿದ್ದಾರೆ ಎಂದು ಎನ್.ಸಿ.ಪಿ ನಾಯಕ ಶರದ್ ಪವಾರ್ ಹೇಳಿದರು.

ಇದರಲ್ಲಿ ಯಾವುದೇ ಕ್ರಾಂತಿಕಾರಕವಾದುದು ಏನಿಲ್ಲ. ಇದು ರಾಜಕೀಯ ನಿರ್ಧಾರವಾಗಿದ್ದರೂ, ಇದು ಬುದ್ಧಿವಂತಿಕೆಯ ನಿರ್ಧಾರವಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅಭಿಪ್ರಾಯಪಟ್ಟರು.

ಕಾಶ್ಮೀರದ ಜನತೆಯೊಂದಿಗೆ ಆಟ ಆಡುತ್ತಿದ್ದೀರಿ. ಹೆಚ್ಚುವರಿ ಸೇನೆ ನಿಯೋಜನೆಯಾದಾಗಲೇ ನಮಗೆ ಚಿಂತೆ ಶುರುವಾಗಿತ್ತು. ಕಾಶ್ಮೀರವನ್ನು ಕೊಸೊವೊ, ಪೂರ್ವ ತೈಮೂರ್ ಮತ್ತು ದಕ್ಷಿಣ ಸೂಡಾನ್ ಮಾಡಬೇಡಿ. ನಾನು ಈ ಮಸೂದೆಯನ್ನು ವಿರೋಧಿಸುತ್ತಿದ್ದೇನೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆ ತರುವ ದಿನ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರಾಜ್ಯಸಭೆಯಲ್ಲಿ ಎಂಡಿಎಂಕೆ ನಾಯಕ ವೈಕೋ ಹೇಳಿದರು.

ಕರಾಳದಿನ. ಭಾರತದ ಸಂವಿಧಾನವನ್ನು ಬಿಜೆಪಿ ಅತ್ಯಾಚಾರ ಮಾಡಿದೆ. ನೀವು ಜಮ್ಮು-ಕಾಶ್ಮೀರದ, ಲಡಾಖ್‍್ನ ಜನರೊಂದಿಗೆ ಮಾತುಕತೆ ನಡೆಸಿಲ್ಲ. ನೀವು ವಿಧಾನಸಭೆಯನ್ನು ವಿಸರ್ಜಿಸಿದಿರಿ, ನಿಮಗೆ ಚುನಾವಣೆಯನ್ನು ನಡೆಸುವುದು ಬೇಕಿಲ್ಲ. ನೀವು ಹೆಚ್ಚುವರಿಯಾಗಿ 35,000 ಸೇನಾ ಸಿಬ್ಬಂದಿಯನ್ನು ನೇಮಿಸಿದ್ದೀರಿ. ನೀವು ಮತ್ತೊಂದು ಪ್ಯಾಲೆಸ್ತೇನ್ ಅನ್ನು ಸೃಷ್ಟಿಸುತ್ತಿದ್ದೀರಿ ಎಂದು ರಾಜ್ಯಸಭೆಯಲ್ಲಿ ಮಾತನಾಡಿದ ಸಿಪಿಐಎಂ ನಾಯಕ ಟಿ.ಕೆ.ರಂಗರಾಜನ್ ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Jammu Kashmir Gulam Nabhi Azad Constitution


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ತಲೆಯಿಲ್ಲದವರ ಮಾತು
  • Anonymous
  • Professional