ಕನ್ನಡದ ಬಗ್ಗೆ ಹರಿಪ್ರಿಯಾ ಹೇಳಿದ್ದೇನು ಗೊತ್ತ?

Haripriya

05-08-2019

ಬಹುಭಾಷಾ ನಟಿ ಹರಿಪ್ರಿಯಾ ತಾವು ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಏಕೆ ಬಳಸುತ್ತಿಲ್ಲ ಎಂದು ಸಮಜಾಯಿಷಿ ನೀಡಿ, ಪತ್ರವೊಂದನ್ನು ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಪತ್ರದಲ್ಲಿ ತಮಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಸುವಂತೆ ಒತ್ತಾಯಿಸುತ್ತಿರುವವರನ್ನು ಉಲ್ಲೇಖಿಸಿರುವ ಅವರು, ತೆಲುಗು, ತಮಿಳು ಮತ್ತಿತರ ಭಾಷೆಯ ತಮ್ಮ ಅಭಿಮಾನಿಗಳಿಗೆ ತಮ್ಮ ವಿಚಾರ ತಿಳಿಯಲಿ ಎಂಬ ಕಾರಣಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇದರೊಂದಿಗೆ, ಬಿಡುವಿರದ ಸಮಯದಲ್ಲಿ ಕನ್ನಡ ಟೈಪ್ ಮಾಡಲು ಸಮಯ ಹೆಚ್ಚು ಬೇಕು. ಅಲ್ಲದೇ, ಕನ್ನಡದಲ್ಲಿ ಟೈಪ್ ಮಾಡುವಾಗ ಧೀರ್ಘ ಮತ್ತಿತರ ಶಬ್ದಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಬರೆದಿರುವುದನ್ನು ನೋಡಿರುವುದಾಗಿ ಕೂಡ ಹೇಳಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ತಮಗೆ ಕನ್ನಡ ಮಾತಾಡಲು, ಬರೆಯಲು, ಓದಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ (ನನ್ನ ಅಕ್ಷರಗಳು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ, ನನ್ನ ಬರವಣಿಗೆಗೆ extra ಅಂಕಗಳು ಗಳಿಸುತ್ತಿದ್ದೆ.) ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ನನಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ ಕನ್ನಡದ ಅಭಿಮಾನಿಗಳಿಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Actor Kannada Haripriya Tweet


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


So nice
  • Ravi r
  • CNC automotive engineering