ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

Flood Situation in North Karnataka

03-08-2019

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈವರೆಗೂ ವಾಡಿಕೆಯ ಮಳೆ ಸುರಿದಿಲ್ಲ. ಮಳೆ ಇಲ್ಲದಿದ್ದರೂ ಉತ್ತರ ಕೆಲ ಗ್ರಾಮಗಳ ಜನ ಪ್ರವಾಹದ ಭೀತಿಯ ಆತಂಕದಲ್ಲಿದ್ದಾರೆ. ನದಿ ಪಾತ್ರದಲ್ಲಿರುವ ತಾಲೂಕಿನ ಜನರಲ್ಲಿ ಭೀತಿ ಆವರಿಸಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ 100 ಮಿಮಿ ನೌಜಾ 123 ಮಿಮಿ, ಮಹಾಬಲೇಶ್ವರ 179 ಮಿಮಿ, ಸಾಂಗ್ಲಿ 19 ಮಿಮಿ, ವಾರಣಾ 129 ಮಿಮಿ, ಕೊಲ್ಲಾಪುರ 23 ಮಿಮಿ, ರಾಧಾನಗರಿ 100 ಮಿಮಿ, ದೂಧಗಂಗಾ 118 ಮಿಮಿ, ಯಷ್ಟು ಬಾರಿ ಮಳೆ ಸುರಿದಿದೆ.ಮಹಾರಾಷ್ಟ್ರದ ವೇದಗಂಗಾ, ದೂಧ್‍ಗಂಗಾ ಹಾಗೂ ಪಂಚಗಂಗಾ ನದಿಗಳ ಮೂಲಕ ಕೃಷ್ಣಾ ನದಿಗೆ ವಿಪರೀತವಾಗಿ ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇರುವ ಕಾರಣ ನದಿ ತೀರದ ತಗ್ಗು ಪ್ರದೇಶದಲ್ಲಿನ ವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗಿದೆ.
ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗಡಿ ಭಾಗದ ಬೆಳವಾಗಿ, ವಿಜಯಪುರ ಜಿಲ್ಲೆಗಳು ಅಪಾಯದ ಅಂಚಿನಲ್ಲಿವೆ. ಪ್ರಮುಖವಾಗಿ ಕೃಷ್ಣಾನದಿ ಉಕ್ಕಿ ಹರಿಯುತ್ತಿದ್ದು, ಜಲಾಶಗಳಿಗೆ ಒಳ ಹರಿವು ಹೆಚ್ಚುತ್ತಿದ್ದಂತೆ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಿಡಲಾಗಿದೆ.
ವಿಜಯಪುರದ ಆಲಮಟ್ಟಿಯ ಲಾಲ್‍ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದು, 2 ಲಕ್ಷ ಕ್ಯೂಸೆಕ್ಸ್‍ಗೂ ಅಧಿಕ ನೀರನ್ನು ಹೊರ ಬಿಡಲಾಗಿದೆ. ಇದರಿಂದಾಗಿ ನಾರಾಯಣಪುರ ಜಲಾಶಯಕ್ಕೂ ಹೆಚ್ಚು ನೀರು ಬರುತ್ತಿದೆ. ಜಲಾಶಯದ ಹಿನ್ನೀರಿನಲ್ಲಿ ಬರುವಂತಹ ರೈತರ ಜಮೀನುಗಳೂ ಜಲಾವೃತವಾಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಂಡಿವೆ.
ಇನ್ನು ಮಹಾರಾಷ್ಟ್ರದ ಸತಾರ ಜಿಲ್ಲೆ, ಕೊಯ್ನಾ ಜಲಾಶಯದ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಅದರಿಂದ ಡ್ಯಾಂನಲ್ಲಿ ಶೇಖರಿಸಿರುವ ನೀರನ್ನು ಹೊರಬಿಡುವ ಸಾಧ್ಯತೆ ಇದ್ದು, ಇದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ.


ಸಂಬಂಧಿತ ಟ್ಯಾಗ್ಗಳು

Flood Krishna River North Karnataka Maharastra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ