ವರ್ಬೆಟಲ್ ಚರ್ಚಾ ಸ್ಪರ್ಧೆ: ಶಿರಸಿ, ಬೆಂಗಳೂರು, ಹುಬ್ಬಳ್ಳಿ ಪ್ರಥಮ

ವರ್ಬೆಟಲ್ ಚರ್ಚಾ ಸ್ಪರ್ಧೆ: ಶಿರಸಿ, ಬೆಂಗಳೂರು, ಹುಬ್ಬಳ್ಳಿ ಪ್ರಥಮ

03-08-2019

ಕಳೆದ ಒಂದು ತಿಂಗಳಿಂದ ನಡೆದ ವರ್ಬೆಟಲ್ ಚರ್ಚಾಸ್ಪರ್ಧೆಯ ಫೈನಲ್ ನಲ್ಲಿ ಶಿರಸಿಯ ಚಂದನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಾದ ಸಿರಿ ಹೆಗಡೆ, ವೈಷ್ಣವಿ ಹೆಗಡೆ ವಿಜೇತರಾಗಿದ್ದಾರೆ. ಜೂನಿಯರ್ ಪ್ಲಸ್ ವಿಭಾಗದಲ್ಲಿ ಬೆಂಗಳೂರಿನ ಕೆನ್ಶ್ರಿಶಾಲೆಯ ನಿರಂಜನ್ , ಶೌನಕ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಕೌಶಲ್, ನೀಲಚಂದನ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಜೂನಿಯರ್ ವಿಭಾಗದ ವಿಜೇತರಿಗೆ 1 ಲಕ್ಷ ರೂ ನಗದು, ಕನ್ನಡ ಹಾಗೂ ಜೂನಿಯರ್ ಪ್ಲಸ್ ವಿಭಾಗದ ವಿಜೇತರಿಗೆ 20 ಸಾವಿರ ರೂ ನಗದು ಬಹುಮಾನ ನೀಡಲಾಯ್ತು. ಅಲ್ಲದೇ ಜೂನಿಯರ್ ವಿಭಾಗದಲ್ಲಿ ಫೈನಲ್ ನಲ್ಲಿ ಭಾಗವಹಿಸಿದ್ದ ಎರಡು ತಂಡಗಳು ಹಾಗೂ ಮಾರ್ಗದರ್ಶಕರಿಗೆ ತಲಾ 20 ಸಾವಿರ ರೂ. ನಗದು ಬಹುಮಾನ ನೀಡಲಾಯ್ತು. ಉಳಿದಂತೆ ಕನ್ನಡ ಹಾಗೂ ಜೂನಿಯರ್ ಪ್ಲಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ತಂಡಗಳಿಗೆ ತಲಾ 5 ಸಾವಿರ ರೂ ನಗದು ಬಹುಮಾನ ವಿತರಿಲಾಯ್ತು.

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಚರ್ಚಾಸ್ಪರ್ಧೆ ನಿನ್ನೆ ಮುಕ್ತಾಯವಾಗಿದ್ದು, ಕನ್ನಡ ವಿಭಾಗದಲ್ಲಿ ರಾಜ್ಯದ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಆಂಗ್ಲ ಭಾಷೆಯ ಜೂನಿಯರ್ ವಿಭಾಗದಲ್ಲಿ 300 ಹಾಗೂ ಜೂನಿಯರ್ ಪ್ಲಸ್ ವಿಭಾಗದಲ್ಲಿ 120 ತಂಡಗಳು ಭಾಗವಹಿಸಿದ್ದರು.

ವರ್ಬೆಟಲ್ ಸಂಸ್ಥಾಪಕ ದೀಪಕ್ ತಿಮ್ಮಯ ಈ ಸ್ಪರ್ಧೆಯ ವಿನ್ಯಾಸಗಾರರಾಗಿದ್ದಾರೆ. ವಕೀಲರಾದ ಬ್ರಿಜೆಶ್ ಕಾಳಪ್ಪ, ಕೇಂದ್ರ ಸರ್ಕಾರದ ಕಂಪ್ಯೂಟರ್ ಶಿಕ್ಷಣ ಸಲಹೆಗಾರ ಸುಚೀಂದ್ರನಾಥ್ ಅಯ್ಯರ್ , ವಕೀಲರಾದ ಸ್ನೇಹ ನಾಗರಾಜ್, ಹೋರಾಟಗಾರ ಟಿ.ಜೆ ಅಬ್ರಹಾಂ, ಉದ್ಯಮಿ ರಾಮ್ ಕುಮಾರ್ ಗೋಪಿಶೆಟ್ಟಿ ತೀರ್ಪುಗಾರರಾಗಿದ್ದರು.


ಸಂಬಂಧಿತ ಟ್ಯಾಗ್ಗಳು

Verbattle Debate Deepak Timmaiah State level


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ