ವರುಣಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ

Mumbai Rain

03-08-2019

ಮುಂಬೈನಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ಮನೆಗಳೆಲ್ಲ ಜಲಮಯವಾಗಿದೆ. ರಸ್ತೆಗಳೆಲ್ಲ ಹೊಳೆಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮನೆಯೊಳಗೆ ನೀರು ಹೊಕ್ಕು ಸಂಪೂರ್ಣ ಆಸ್ತಿಪಾಸ್ತಿ ಜಲಾವೃತವಾಗಿದ್ದು, ಜನಸಾಮಾನ್ಯರ ಬದುಕು ನೀರುಪಾಲಾಗಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ರೈ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಸಬರ್ಬನ್ ರೈಲಿ ಸಮಯದಲ್ಲೂ ವ್ಯತ್ಯಯವಾಗಿದೆ. ಅಲ್ಲದೇ ವಿಮಾನ ಹಾರಾಟದಲ್ಲಿ ಕೂಡ ವ್ಯತ್ಯಾಸವಾಗಿದೆ. ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಯಾರೂ ಕೂಡ ಸಮುದ್ರದ ಬಳಿ ತೆರಳದಂತೆ ಮುಂಬೈ ಮುನ್ಸಪಲ್ ಕಾರ್ಪೋರೇಷನ್ ಎಚ್ಚರಿಕೆ ನೀಡಿದೆ. ಈ ಮಧ್ಯೆ ಇನ್ನೂ 24 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಸಂಬಂಧಿತ ಟ್ಯಾಗ್ಗಳು

Mumbai Rail Heavy Rain Flight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ