ಕಾಂಗ್ರೆಸ್ ನಲ್ಲಿ ವಿಪ್ಲವ

Dinesh Gundu Rao

02-08-2019

ಜೆಡಿಎಸ್ ಕಾಂಗ್ರೆಸ್ ಸರ್ಕಾರ ಪತನವಾಗಿ, ಅತೃಪ್ತರಾಗಿ ಕೈಕೊಟ್ಟಿರುವ ಶಾಸಕರೆಲ್ಲರೂ ಅನರ್ಹರಾದ ಬಳಿಕ ಕಾಂಗ್ರೆಸ್ ಮತ್ತೆ ಉಪಚುನಾವಣೆಯತ್ತ ಗಮನ ಹರಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಬಲ ತುಂಬಲು ನಾಯಕತ್ವದಲ್ಲಿ ಬದಲಾವಣೆಯಾಗುತ್ತದೆಂದು ಊಹಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ರನ್ನು ಬದಲಾಯಿಸಲಾಗುತ್ತದೆ. ಆ ಸ್ಥಾನಕ್ಕೆ ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್ ಹೆಸರೂ ಕೂಡ ಕೇಳಿಬಂದಿತ್ತು. ಆದರೆ ಅಂಥ ಯಾವುದೇ ಬದಲಾವಣೆಗಳೂ ಕೈ ಪಕ್ಷದಲ್ಲಿ ನಡೆದಿಲ್ಲ. ಬದಲಾಗಿ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರೇ ಮುಂದುವರಿಯುತ್ತಾರೆ ಎನ್ನಲಾಗಿದೆ. ಅಲ್ಲದೇ ಪ್ರತಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಮೂಲಗಳು ತಿಳಿಸಿವೆ. 


ಸಂಬಂಧಿತ ಟ್ಯಾಗ್ಗಳು

KPCC Congress Dinesh Gundu Rao Siddaramaiah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ