ಖ್ಯಾತ ಪತ್ರಕರ್ತ ರವೀಶ್ ಕುಮಾರ್‍ಗೆ ಮ್ಯಾಗ್ಸೆಸೆ ಪ್ರಶಸ್ತಿ

Journalist Ravish Kumar among 2019 Ramon Magsaysay award winners

02-08-2019

2019ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರಿಗೆ ಒಲಿದಿದೆ. ಆಗಸ್ಟ್ 31ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವೀಶ್ ಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 44ರ ಹರೆಯದ ರವೀಶ್ ಕುಮಾರ್ ಎನ್‍ಡಿಟಿವಿ ಇಂಡಿಯಾ ಸುದ್ದಿವಾಹಿನಿಯಲ್ಲಿ ಹಿರಿಯ ಕಾರ್ಯಕಾರಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿಸುತ್ತಿದ್ದಾರೆ.
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಕಟುಟೀಕೆಗಳಿಂದ ರವೀಶ್ ಕುಮಾರ್ ಹೆಸರಾಗಿದ್ದಾರೆ. ಇವರಿಗೆ ಪ್ರಶಸ್ತಿ ನೀಡಿರುವ ಸಂದರ್ಭದಲ್ಲಿ, ಭಾರತದ ಅತ್ಯಂತ ಪ್ರಭಾವಿ ಟಿವಿ ಪತ್ರಕರ್ತರಲ್ಲಿ ರವೀಶ್ ಕುಮಾರ್ ಅವರು ಒಬ್ಬರು ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ ಹೇಳಿದೆ.
ಏಷ್ಯಾ ಖಂಡದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ, ಸೇವೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಏಷ್ಯಾದ ಅತ್ಯುನ್ನತ ನಾಗರಿಕ ಗೌರವ ಎಂದೇ ಈ ಪ್ರಶಸ್ತಿ ಹೆಸರಾಗಿದೆ. ಅಲ್ಲದೇ, ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕೂಡ ಈ ಪ್ರಶಸ್ತಿಯನ್ನು ಕರೆಯಲಾಗುತ್ತದೆ. 
 


ಸಂಬಂಧಿತ ಟ್ಯಾಗ್ಗಳು

Journalist Ramon Magsaysay Ravish Kumar Award


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ