ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ !

Kannada News

12-06-2017

ಬೆಂಗಳೂರು:- ಪೀಣ್ಯದ ಎರಡನೇ ಹಂತದಲ್ಲಿ ಭಾನುವಾರ ರಾತ್ರಿ ಜೀವನದಲ್ಲಿ ಜಿಗುಪ್ಸೆ ಹೊಂದಿದ ಕ್ಯಾಬ್ ಚಾಲಕರೊಬ್ಬರು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಣ್ಯ ಎರಡನೇ ಹಂತದ ನಿವಾಸಿ ರಂಗಸ್ವಾಮಿ(27)ಮೃತಪಟ್ಟವರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ರಂಗಸ್ವಾಮಿ ಅವರು ಅಣ್ಣನ ಮನೆಯಲ್ಲಿದ್ದುಕೊಂಡು ಕ್ಯಾಬ್ ಚಾಲಕರಾಗಿ ಕೆಲಸಕ್ಕೆ ಹೋಗುತ್ತಿದ್ದರು. ಅಣ್ಣ ಆತನ ಪತ್ನಿಯೊಂದಿಗೆ ಊರಿಗೆ ಹೋಗುತ್ತಿದ್ದ ರಾತ್ರಿ ಮನೆಯಲ್ಲಿ ರಂಗಸ್ವಾಮಿ ಅವರು ಒಂಟಿಯಾಗಿದ್ದು, ರಾತ್ರಿ 9 ರ ವೇಳೆ ಸೀರೆಯಿಂದ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಹಲವು ಬಾರಿ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ಆತಂಕಗೊಂಡ ಅವರು ಸ್ನೇಹಿತನಿಗೆ ಕರೆ ಮಾಡಿ ಕೇಳಿದ್ದಾರೆ, ಆತನ ಮನೆ ಬಳಿ ಬಂದು ಎಷ್ಟು ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಕಿಟಕಿ ಬಾಗಿಲು ತೆಗೆದು ನೋಡಿದಾಗ ನೇಣು ಬಿಗಿದುಕೊಂಡಿದ್ದರು. ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ