ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರ ಆಗುತ್ತಾ?

B S Yediyurappa

01-08-2019

ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರ ಆಗುತ್ತಾ?ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಅಸ್ವಿತ್ವಕ್ಕೆ ಬಂದು 4 ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಯಡಿಯೂರಪ್ಪನವರು ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡ್ತಾರಾ ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಇದಕ್ಕೆ ಕಾರಣ ಅವರ ನೆಂಟರಿಷ್ಟರು. ಹೌದು.. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಂದ ಅಧಿಕಾರಿಗಳು ಬಿಎಸ್ ವೈ ನೆಂಟರಿಷ್ಟರ ಮನೆ ಬಳಿ ಹೋಗೋದು ಆರಂಭವಾಗಿದೆಯಂತೆ. ಅಲ್ಲದೇ ಬಿಎಸ್ ವೈ ಮನೆ ಮುಂದೆ ಸಾಲು ಸಾಲು ಜನರು ಸೇರಲು ಶುರುಮಾಡಿದ್ದಾರೆ. 
ಬಿಎಸ್ ವೈ ವಿಶಾಲ ಹೃದಯದವರು ಅನ್ನೋದನ್ನು ಒಪ್ಪಿಕೊಂಡರೂ ವಿಪರೀತ ಸಾಲಮಾಡಿಕೊಂಡಿರುವ ಕಾರಣ, ಮತ್ತಷ್ಟು ತಪ್ಪು ಮಾಡಿಕೊಂಡು ಪಶ್ಚಾತ್ತಾಪ ಪಡುವಂತಾಗುತ್ತದೆಯೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 
ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು, ಕುಟುಂಬದವರನ್ನು, ನೆಂಟರಿಷ್ಟರನ್ನು ಆಡಳಿತದೊಳಗೆ ಬಿಟ್ಟುಕೊಳ್ಳದೇ ಸ್ವಚ್ಛ ಆಡಳಿತ ನೀಡಬೇಕು. ಅಲ್ಲದೇ ಹೋದಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದಿದ್ದಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಯಡಿಯೂರಪ್ಪನವರು ಅದನ್ನು ಕಿವಿಮೇಲೆ ಹಾಕಿಕೊಂಡೇ ಇಲ್ಲ ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

BS Yediyurappa BJP Amith Shah Karnataka Cm


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ