ರಾಜ್ಯದ ಎಲ್ಲ ಬಡವರಿಗೂ ಸಿಗಲಿದೆ ಸೂರು

Yediyurappa statement

01-08-2019

ಬೆಂಗಳೂರು: ಬಡವರಿಗೆ ಮನೆ ಸಿಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಎಲ್ಲ ಬಡವರಿಗೂ ಮನೆ ಕೊಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ವಸತಿ, ಆರ್ಥಿಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಕನಸು 3-4 ವರ್ಷಗಳಲ್ಲಿ ಬಡವರಿಗೆ ಮನೆ ಸಿಗಬೇಕು. ಈ ನಿಟ್ಟಿನಲ್ಲಿ ಇಂದು ವಸತಿ ಇಲಾಖೆ ಸಭೆ ಮಾಡಿದ್ದೇನೆ. ಒಂದು ಲಕ್ಷ ಮನೆ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಎರಡು ಲಕ್ಷ ಮನೆ ನಿರ್ಮಾಣದ ಗುರಿ ಇದೆ ಎಂದರು.
ಎರಡು ಲಕ್ಷ ಮನೆ ನಿರ್ಮಾಣಕ್ಕಾಗಿ ಒಂದು ಸಾವಿರ ಎಕರೆ ಜಾಗ ಈಗಾಗಲೇ ಗುರುತಿಸಲಾಗಿದೆ. 14+ ಮಹಡಿ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಗುಜರಾತ್ ನಲ್ಲೂ ಇದೇ ಮಾದರಿಯ ಮನೆ ನಿರ್ಮಾಣ ಕೆಲಸ ಆಗಿದೆ. ನಮ್ಮ ರಾಜ್ಯದಲ್ಲೂ ಬಡವರಿಗೆ ಮನೆ ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬೆಳೆ ಸಮೀಕ್ಷೆ ಕುರಿತು ಚರ್ಚೆ ಆಗಿದೆ. ಯುವಕ-ಯುವತಿಯರಿಗೆ ಇದರಿಂದ ಕೆಲಸ ಸಿಕ್ಕಿದೆ. ಬೆಳೆ ಸಮೀಕ್ಷೆ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸ ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ನಮ್ಮ ಇತಿ-ಮಿತಿಯಲ್ಲಿ ಹಣಕಾಸಿನ ಸ್ಥಿತಿ ಇದೆ. ಸಂಪನ್ಮೂಲ ಕ್ರೂಢೀಕರಣ ಕೂಡಾ ನಿರೀಕ್ಷೆ ಮಟ್ಟದಲ್ಲಿ ಇದೆ. ಯಾವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ಆರ್ಥಿಕ ಸ್ಥಿತಿ ಬಗ್ಗೆ ನಮಗೆ ತೃಪ್ತಿ ಇದೆ ಎಂದು ನುಡಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Economy Poverty Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ