ವಿ ಜಿ ಸಿದ್ಧಾರ್ಥ ಮಾಡಿಕೊಂಡ ಸಾಲವೆಷ್ಟು ಗೊತ್ತ?

V G Siddharth

01-08-2019

ಕಾಫಿ ಡೇ ಸಂಸ್ಥಾಪಕ, ಉದ್ಯಮಿ ವಿ ಜಿ ಸಿದ್ಧಾರ್ಥ ಸಾವು ಇಡೀ ರಾಜ್ಯವನ್ನಷ್ಟೇ ಅಲ್ಲ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಎಂಜಿ ರೋಡ್ ನಲ್ಲಿ ಸಣ್ಣದಾಗಿ ಶುರು ಮಾಡಿದ್ದ ಕೆಫೆ ಕಾಫಿ ಡೇ ಕಂಪು ಇಂದು ಇಡೀ ದೇಶದಲ್ಲಷ್ಟೇ ಅಲ್ಲ, ಪ್ರಪಂಚದೆಲ್ಲೆಡೆ ಪಸರಿಸಿತ್ತು. ವಿದೇಶಗಳಲ್ಲೇ ಸಾವಿರಕ್ಕೂ ಹೆಚ್ಚು ಕಾಫಿ ಡೇ ಶಾಖೆಗಳಿದ್ದವು. ಇಂಥ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದ ಸಿದ್ಧಾರ್ಥ ಸಾವನ್ನಪ್ಪಲು ಅವರು ಮಾಡಿದ್ದ ಸಾಲವೇ ಕಾರಣ ಎನ್ನಲಾಗುತ್ತಿದೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿದ್ದೂ ಅಲ್ಲದೇ ಅವರು ಒಂದು ಸಾವಿರ ಕೋಟಿ ರೂ. ಸಾಲವನ್ನು ವೈಯಕ್ತಿಕವಾಗಿ ಮಾಡಿದ್ದರು ಎನ್ನಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಸಾಲವನ್ನ ಸಿದ್ಧಾರ್ಥ ಯಾಕೆ ಮಾಡಿದ್ದರು ಅನ್ನೋದು ಯಕ್ಷ ಪ್ರಶ್ನೆ. ಆದರೆ ಈ ಸಾಲದ ಸುಳಿಯೇ ಅವರ ಪ್ರಾಣಕ್ಕೆ ಎರವಾಯ್ತಾ ಅನ್ನೋ ಪ್ರಶ್ನೆ ಎದ್ದಿರುವುದು ಸುಳ್ಳಲ್ಲ. 


ಸಂಬಂಧಿತ ಟ್ಯಾಗ್ಗಳು

VG Siddharth SM Krishna Coffee Day Loan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ