ರಾಜಕೀಯ ದೊಂಬರಾಟದಲ್ಲಿ ದಸರಾ ಸಿದ್ಧತೆ ಬಗ್ಗೆ ನಿರ್ಲಕ್ಷ್ಯ!?

Mysore Dasara

01-08-2019

ಕಳೆದೊಂದು ತಿಂಗಳಿಂದ ರಾಜ್ಯದಲ್ಲಿ ಬರೀ ರಾಜಕೀಯ ಹೈಡ್ರಾಮಾ... ಶಾಸಕರ ರಾಜೀನಾಮೆ, ಅತೃಪ್ತರ ರೆಸಾರ್ಟ್ ವಾಸ, ವಿಶ್ವಾಸ ಮತ, ದೋಸ್ತಿ ಸರ್ಕಾರ ಪತನ, ನೂತನ ಸರ್ಕಾರ ಆಗಮನ, ಅತೃಪ್ತರ ಓಲೈಕೆ, ನೂತನ ಕ್ಯಾಬಿನೆಟ್ ಗೆ ಮೀನ ಮೇಷ ಹೀಗೆ ಒಂದಲ್ಲ ಒಂದು ರಾಜಕೀಯ ನಾಟಕಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಇವೆಲ್ಲದರ ಮಧ್ಯೆ ಅಭಿವೃದ್ಧಿ ಕಾರ್ಯಗಳೇನೂ ನಡೆಯುತ್ತಿಲ್ಲ. ಇದಲ್ಲದೇ ನಮ್ಮ ನಾಡು ನುಡಿಯ ಶ್ರೀಮಂತಿಕೆಯ ಸಂಕೇತವಾದ ಮೈಸೂರು ದಸರಾ ಸಿದ್ಧತೆ ಕುರಿತು ಕೂಡ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಮೇ ಅಥವಾ ಜೂನ್ ತಿಂಗಳಲ್ಲೇ ಮೈಸೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಸಬೇಕಿತ್ತು. ಆದರೆ ಈ ವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾಗದ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳು ಬಂದರೂ ಉನ್ನತ ಮಟ್ಟದ ಸಭೆ ನಡೆದಿಲ್ಲ ಎನ್ನಲಾಗುತ್ತಿದೆ. 
ರಾಜಕೀಯ ದೊಂಬರಾಟದ ಮಧ್ಯೆ ನಮ್ಮ ನಾಡು - ನುಡಿ, ಸಂಸ್ಕøತಿಯ ಪ್ರತೀಕವಾದ ದಸರಾ ಸಿದ್ಧತೆ ಸರಿಯಾಗಿ ನಡೆಯುತ್ತಿಲ್ಲ ಎಂಬುದು ಖೇದಕರ ಎಂದು ಜನರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

Mysore Karnataka Crisis Dasara BS Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ