ರಾಜ್ಯದಲ್ಲಿ ಶುರುವಾಗಿದೆ ಎತ್ತಂಗಡಿ ಕಾರ್ಯ!

Officers Transfer

31-07-2019

ಬೆಂಗಳೂರು: ಅಧಿಕಾರಕ್ಕೆ ಬಂದ ಕೂಡಲೇ ಆಡಳಿತ ಚುಕ್ಕಾಣಿಯ ಮೇಲೆ ಬಿಗಿ ಹಿಡಿತ ಸಾಧಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ನಗರದ ಪೋಲೀಸ್ ಕಮೀಷನರ್ ಅವರನ್ನು ಬದಲಿಸಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಕಮಲ್‍ಪಂಥ್ ಹಾಗೂ ಭಾಸ್ಕರರಾವ್ ಅವರ ಹೆಸರುಗಳು ನೂತನ ಪೋಲೀಸ್ ಕಮೀಷನರ್ ಹುದ್ದೆಗೆ ಕೇಳಿ ಬಂದಿವೆ.
ಹಾಲಿ ಪೋಲೀಸ್ ಕಮೀಷನರ್ ಅಲೋಕ್ ಕುಮಾರ್ ಅವರನ್ನು ಬದಲಿಸಿ, ಆ ಜಾಗಕ್ಕೆ ತಮಗೆ ಬೇಕಾದವರನ್ನು ತಂದು ಕೂರಿಸಲು ಯಡಿಯೂರಪ್ಪ ಬಯಸಿದ್ದು ಈ ಹಿನ್ನೆಲೆಯಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ರೇಸಿಗೆ ಬಂದಿವೆ.
ಇದೇ ರೀತಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯ ರೇಸಿಗೂ ಹಲವರ ಹೆಸರುಗಳು ಕೇಳಿ ಬಂದಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಕಾರ್ಯ ಆಗಲೇ ಶುರುವಾಗಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Officers Cabinet Transfer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ