ಫೆಲೋಶಿಪ್ ವಿಳಂಬ: ವಿವಿ ವಿದ್ಯಾರ್ಥಿಗಳಿಂದ ಧರಣಿ

Students Protest

31-07-2019

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ 200ಕ್ಕೂ ಹೆಚ್ಚಿನ ಸಂಶೋಧನ ವಿದ್ಯಾರ್ಥಿಗಳು 2 ವರ್ಷದಿಂದ ಫೆಲೋಶಿಪ್ ಬಂದಿಲ್ಲ ಎಂಬ ಕಾರಣಕ್ಕೆ ನಿನ್ನೆಯಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆಡಳಿತಾಂಗ ಅನುದಾನವಿಲ್ಲದ ಕಾರಣ ಫೆಲೋಶಿಪ್ ಪಾವತಿಸಲು ಸಮಯ ಕೇಳುತ್ತಿದೆ. ಹಿಂದುಳಿದ ದಲಿತ ದಮನಿತ ಬುಡಕಟ್ಟು ಅಲ್ಪಸಂಖ್ಯಾತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎರಡು ವರ್ಷದಿಂದ ಫೆಲೋಶಿಪ್ ಇಲ್ಲದೆ ಹೋದರೆ ಸಂಶೋಧನೆಯಲ್ಲಿ ತೊಡಗುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯರೂಪ್ಪನವರು ತಕ್ಷಣ ಬೇಡಿಕೆಗೆ ಕಿವಿಗೊಟ್ಟು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕು. ಬಿಜೆಪಿಯ ಕಾರ್ಯಕರ್ತರು ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮಾಹಿತಿ ತಲುಸಿ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

students Fellowship Protest Kannada University


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ