RSS ಸೇನಾ ಶಾಲೆಯಲ್ಲಿ ಗುಂಪು ಹತ್ಯೆ ಕಲಿಸಲಾಗುತ್ತಿದೆ : ಎಸ್ ಪಿ

Sp reaction regarding RSS School

31-07-2019

ಲಖ್ನೋ: ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ. ಬುಲಂದ್‍ಶಹರ್‍ನ ಶಿಕರ್‍ಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇನಾ ಶಾಲೆಯನ್ನು ತೆರಿದಿದೆ. ಈ ಕುರಿತು ತಕರಾರು ತೆಗೆದಿರುವ ಸಮಾಜವಾದಿ ಪಕ್ಷ, ಆರ್‍ಎಸ್‍ಎಸ್‍್ ಪ್ರತ್ಯೇಕ ಸೇನಾ ಶಾಲೆಯನ್ನು ತೆರೆಯುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದೆ. ಅಲ್ಲದೇ, ಇದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದು ರಾಷ್ಟ್ರೀಯ ಮಟ್ಟದ ಪಿತೂರಿ. ಇದು ಸಂವಿಧಾನದ ಕಡೆಗಣನೆ ಎಂದು ಕೂಡ ಪಕ್ಷ ಆರೋಪಿಸಿದೆ.
ಆರ್‍ಎಸ್‍ಎಸ್‍ ಒಡೆದು ಆಳುವ ತತ್ವವನ್ನು ಅನುಸರಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಇದು ನಕಾರಾತ್ಮಕ ಪಾತ್ರ ವಹಿಸಿತ್ತು ಮತ್ತು ಇಂದಿನ ಸಂದರ್ಭದಲ್ಲಿ ಇದರ ಕೊಡುಗೆ ಏನಿಲ್ಲ. ಆರ್‍ಎಸ್‍ಎಸ್‍ ರಾಜಕೀಯ ಲಾಭಕ್ಕಾಗಿ ಇಂತಹ ಸಂಸ್ಥೆಗಳನ್ನು ಸ್ಥಾಪಿಸುತ್ತದೆ. ಇದರ ಮೂಲಕ ಸಮಾಜದಲ್ಲಿರುವ ಶಾಂತಿಯನ್ನು ಹಾಳು ಮಾಡುತ್ತದೆ ಮತ್ತು ಗುಂಪು ಹತ್ಯೆಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದು ಸಮಾಜವಾದಿ ಪಕ್ಷ ದೂರಿದೆ.
 


ಸಂಬಂಧಿತ ಟ್ಯಾಗ್ಗಳು

RSS School SP bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ