ಪಬ್ ನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ !

Kannada News

12-06-2017

ಹರಿಯಾಣ:- ಗುರ್ಗಾಂವ್ ನ ಪಬ್ ಒಂದರಲ್ಲಿ ಕಾಮುಕನೊಬ್ಬ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರುಕುಳ ನೀಡಿದ ಆತನನ್ನು ಪಬ್ ಸಿಬ್ಬಂದಿ ಚಪ್ಪಲಿಯಿಂದ ಥಳಿಸಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.  ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಪಬ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಬರಸೆಳೆದುಕೊಂಡಿದ್ದಾನೆ. ಆಗ ಸಹಾಯಕ್ಕಾಗಿ ಆಕೆ ಕೂಗಿಕೊಂಡಿದ್ದಳು, ಕೂಡಲೇ ಧಾವಿಸಿ ಬಂದ ಸಿಬ್ಬಂದಿ, ಕಾಮುಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಘಟನೆ ನಡೆದಾಗ ಸುತ್ತಮುತ್ತ ಒಬ್ಬರೂ ಪೊಲೀಸರು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಆದರೆ ಎಸಿಪಿ ಮನೀಶ್ ಸೆಹಗಲ್ ಮಾತ್ರ ಪೊಲೀಸರನ್ನು ಭದ್ರತೆಗೆ ನಿಯೋಜಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತು ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ಇದ್ದರು ಎಂದಿದ್ದಾರೆ. ಮತ್ತು ಮಹಿಳೆ ದೂರು ನೀಡಲು ಮುಂದಾದರೆ ಎಫ್ ಐ ಆರ್ ದಾಖಲಿಸಿಕೊಳ್ಳುವಂತೆ ಸೂಚಿಸಿರುದಾಗಿ ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ