ರಶ್ಮಿಕಾಗೆ ಯಾರ ಜೊತೆ ಸಿನಿಮಾ ಮಾಡೋಕೆ ಇಷ್ಟ ಗೊತ್ತ?

Rashmika mandanna

31-07-2019

ರಶ್ಮಿಕಾ ಮಂದಣ್ಣ.. ಕೊಡಗಿನ ಈ ನಟಿ ಸದ್ಯ ತೆಲಗು ಚಿತ್ರರಂಗದಲ್ಲ್ಲಿ ಸಖತ್ ಬ್ಯುಸಿ. ಆಕೆಗೆ ತೆಲಗುವಿನಲ್ಲಿ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ. ನಟ ವಿಜಯ್ ದೇವರ ಕೊಂಡ ಜೊತೆ ತೆರೆ ಹಂಚಿಕೊಂಡಿದ್ದ ರಶ್ಮಿಕಾ ಗೆ ವಿಜಯ್ ಕಂಡರೆ ಬಲು ಇಷ್ಟ ಅನ್ನೋದು ಎಲ್ಲರಿಗೂ ತಿಳಿದ ವಿಷಯವೇ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ವಿಜಯ್ ಹಾಗೂ ರಶ್ಮಿಕಾ ನಟನೆಯ ಡಿಯರ್ ಕಾಮ್ರೆಡ್ ಚಿತ್ರ ಯಶಸ್ವಿಯಾಗಿ ಓಡುತ್ತಿದೆ. ಈ ನಡುವೆ ತಮಗೆ ವಿಜಯ್ ದೇವರಕೊಂಡ ಜೊತೆ ನಟಿಸೋದು ಸಖತ್ ಇಷ್ಟ ಅಂತಾ ಅವರೇ ಹೇಳಿಕೊಂಡಿದ್ದಾರೆ. 
ವಿಜಯ್ ಜೊತೆ ಮತ್ತೆ ಬೇರೆ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆಂಬುದು ಸದ್ಯಕ್ಕೆ ಗಾಳಿ ಸುದ್ದಿ. ಆದರೆ ಈ ಗಾಳಿಸುದ್ದಿಗಳೆಲ್ಲ ನಿಜವಾಗಲಿ ಅಂತಾ ನಾನೂ ಪ್ರಾರ್ಥಿಸುತ್ತೇನೆ. ವಿಜಯ್ ದೇವರಕೊಂಡ ಜೊತೆ ಕೆಲಸ ಮಾಡಲು ನನಗೂ ಬಲು ಇಷ್ಟ ಅಂತಾ ರಶ್ಮಿಕಾ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.
ಸದ್ಯ ರಶ್ಮಿಕಾ ತಮಿಳಿನಲ್ಲಿ ನಟ ಕಾರ್ತಿ ಜೊತೆ ಚೊಚ್ಚಲ ಚಿತ್ರಕ್ಕೆ ಸಹಿ ಹಾಕಿದ್ದು, ಇನ್ನೇನು ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. 
 


ಸಂಬಂಧಿತ ಟ್ಯಾಗ್ಗಳು

Rashmika Mandanna Actory Vijay Devarakonda Tollywood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ