ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ್ ಮೃತದೇಹ ಪತ್ತೆ

Cafe Coffee Day owner VG Siddhartha dead, body found

31-07-2019

ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ್ ಮೃತದೇಹ ಪತ್ತೆ...
ಬೆಂಗಳೂರು: ಮಂಗಳೂರಿನ ನೇತ್ರಾವತಿ ನದಿ ಸಮೀಪ ಸೋಮವಾರ  ರಾತ್ರಿಯಿಂದ ನಾಪತ್ತೆಯಾಗಿದ್ದ ಮಾಜಿ ಸಿಎಂ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.  ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ. 
ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ. ಸದ್ಯ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ಸಿದ್ದಾರ್ಥ್ ಮೃತದೇಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಚೇತನಹಳ್ಳಿಯಲ್ಲಿ ಸ್ನೇಹಿತರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಮೂಡಿಗೆರೆ ತಾಲೂಕಿನಲ್ಲಿನ ಚೇತನ ಹಳ್ಳಿಯಲ್ಲಿರುವ ಚೇತನ ಕಾಫಿ ಎಸ್ಟೇಟ್​ಗೆ ಸಂಬಂಧಿಕರು ಹಾಗೂ ಸ್ನೇಹಿತರ ದಂಡು ಹರಿದು ಬರುತ್ತಿದೆ
ಚೇತನ ಕಾಫಿ ಎಸ್ಟೇಟ್​ನಲ್ಲಿ ಸಿದ್ದಾರ್ಥ್​ ಅವರ ತಾಯಿ ವಸಂತಿ ಹೆಗ್ಡೆ ವಾಸವಾಗಿದ್ದು, ಪುತ್ರನ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಹೇಳಾಗುತ್ತಿದೆ. ಇಂದು ಬೆಳಗ್ಗೆಯಿಂದ ವಸಂತಿ ಹೆಗ್ಡೆ ಅವರನ್ನು ವೈದ್ಯರು ಎರಡು ಬಾರಿ ತಪಾಸಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಅವರ ತಂದೆ ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಅವರ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟಲಿಲ್ಲವಲ್ಲ ಎಂದು ಮೌನಕ್ಕೆ ಶರಣಾಗಿದ್ದಾರೆ. ಮೃತರ ಗೌರವಾರ್ಥ ಗೌರವಾರ್ಥವಾಗಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದಿಂದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನ ಎಲ್ಲ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಕಾಫಿ ತೋಟ ಕಾರ್ಮಿಕರಿಗೆ ರಜೆ ನೀಡಲಾಗಿದೆ.
 


ಸಂಬಂಧಿತ ಟ್ಯಾಗ್ಗಳು

VG Siddharth Nethravati River Coffee Day Mangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ