ಕೆಜಿಎಫ್ 2 ನಲ್ಲಿ ಸಂಜಯ್ ದತ್ ಫಸ್ಟ್ ಲುಕ್

Sanjay Dutt

30-07-2019

ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ರಾಕಿಭಾಯ್ ಆಗಿ ಯಶ್ ಮಿಂಚಿದ್ದರು. ಇದು ಹಿಂದಿ, ತೆಲಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ತೆರೆ ಕಂಡಿದ್ದು, ಭಾರೀ ಯಶಸ್ಸು ಕಂಡಿತ್ತು.

ಈಗಾಗಲೇ ಕೆಜಿಎಫ್ 2 ಚಿತ್ರೀಕರಣ ನಡೆಯುತ್ತಿದ್ದು, ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ ಕೆಜಿಎಫ್ 2 ನಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಫರಾನ್ ಅಖ್ತರ್,  ಸಂಜು ಭಾಯ್ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತೀವ್ರ ಕುತೂಹಲ ಮೂಡಿಸಿರುವ ಕೆಜಿಎಫ್ 2 ಚಿತ್ರದಲ್ಲಿ ಕೇವಲ ಸಂಜಯ್ ದತ್ ಮಾತ್ರವಲ್ಲ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sanjay Dutt KGF Yash Kannada Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ