ಹುಲಿಸಂತತಿ: ಕರ್ನಾಟಕಕ್ಕೆ 2 ನೇ ಸ್ಥಾನ

Madhya Pradesh Is India

29-07-2019

2018 ಹುಲಿಗಣತಿ ಪ್ರಕಾರ ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 526 ಹುಲಿಗಳಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ ಹುಲಿ ಸಂತತಿಯಲ್ಲಿ 2ನೇ ಸ್ಥಾನ ಕರ್ನಾಟಕ ಪಡೆದಿದ್ದು, ಇಲ್ಲಿರುವ ಹುಲಿಗಳ ಸಂಖ್ಯೆ 524. ಹಾಗೆಯೇ 3 ನೇ ಸ್ಥಾನದಲ್ಲಿ ಉತ್ತರಾಖಂಡ ವಿದ್ದು, ಅಲ್ಲಿ 442 ಹುಲಿಗಳಿವೆ. ಈ ಮಧ್ಯೆ ಸಮಾಧಾನಕರ ಸಂಗತಿಯೆಂದರೆ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು. ಹೌದು, 2006ರಲ್ಲಿ ದೇಶದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ 1400 ಆಗಿತ್ತು. ಆದರೆ 2019ರಲ್ಲಿ 2977 ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಕುರಿತು ಮಾತನಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಹುಲಿ ಸಂತತಿಯನ್ನು ಹೆಚ್ಚಿಸಲು ತಮ್ಮ ಸರ್ಕಾರ ಪೂರ್ಣಪ್ರಮಾಣದಲ್ಲಿ ಗಮನ ಹರಿಸುವುದಾಗಿ ಹೇಳಿದ್ದಾರೆ. ಅಲ್ಲದೇ, ಹುಲಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ರಾಷ್ಟ್ರೀಯ ಉದ್ಯಾನವನ, ಸಂರಕ್ಷಿತಾರಣ್ಯಗಳ ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Tiger Cm Kamal Nath Madhya Pradesh Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ