ಪ್ರಿಯಾಂಕಾ ಬರ್ತ್ ಡೇ ಕೇಕ್ ಬೆಲೆ ಎಷ್ಟು ಗೊತ್ತ?

Priyanka Chopra

29-07-2019

ಮೊನ್ನೆಯಷ್ಟೇ ದೇಸೀ ಗರ್ಲ್ ಖ್ಯಾತಿಯ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 37 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಪತಿ ನಿಕ್ ಜೋನ್ಸ್ ತನ್ನ ಸೆಲೆಬ್ರಿಟಿ ಪತ್ನಿಗಾಗಿ ಅತ್ಯಾಕರ್ಷಕ ಕೇಕ್ ತರಿಸಿದ್ದರು. ಪ್ರಿಯಾಂಕಾ ಧರಿಸಿದ್ದ ಡ್ರೆಸ್ ನಂತೆಯೇ ರೆಡ್ ಕಲರ್ ಹಾಗೂ ಗೋಲ್ಡನ್ ಡಿಸೈನ್ ಇದ್ದ ಕೇಕ್ ಬೆಲೆ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರಾ.

ಹೌದು.. ಇಡೀ ಬರ್ತ್ ಡೇ ಪಾರ್ಟಿಯಲ್ಲಿ ಕಣ್ಮನ ಸೆಳೆದಿದ್ದೇ ಬರ್ತ್ ಡೇ ಕೇಕ್. ಈ ಕೇಕ್ ತಯಾರು ಮಾಡೋಕೆ 24 ಗಂಟೆಗಳು ಬೇಕಾಗಿದ್ದು, ರೆಡ್ ಕಲರ್ ಮಲ್ಟಿ ಲೇಯರ್ ಕೇಕ್ ಗೆ ಗೋಲ್ಡನ್ ಟಚ್ ಕೂಡ ಕೊಡಲಾಗಿದೆ. ಪ್ರಿಯಾಂಕಾ ಕೂಡ ಇಂಥದ್ದೇ ಡ್ರೆಸ್ ಧರಿಸಿದ್ದರಿಂದ ನೋಡಲು ಇನ್ನಷ್ಟು ಅತ್ಯಾಕರ್ಷಕವಾಗಿತ್ತು. ಈ ಚಾಕೊಲೇಟ್ ಹಾಗೂ ವೆನಿಲ್ಲಾ ಕಾಂಬಿನೇಷನ್ ಕೇಕ್ ಬೆಲೆ 5 ಸಾವಿರ ಅಮೆರಿಕನ್ ಡಾಲರ್ ಅಂದರೆ ಸುಮಾರು 3 ಲಕ್ಷ 45 ಸಾವಿರ ರೂಗಳಾಗಿವೆ.


ಸಂಬಂಧಿತ ಟ್ಯಾಗ್ಗಳು

Priyanka Chopra Nick Jonas Bollywood Actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ