ಗಂಗೆಯನ್ನು ಮಲಿನ ಮಾಡುವವರಿಗೆ 7 ವರ್ಷ ಜೈಲು ಶಿಕ್ಷೆ ?

Kannada News

12-06-2017

ನವದೆಹಲಿ:- ಗಂಗೆಯನ್ನು ಇತ್ತೀಚೆಗಷ್ಟೇ ಜೀವಂತ ವಸ್ತು ಎಂದು ಉತ್ತರಾಖಂಡ ಹೈಕೋರ್ಟ್ ಘೋಷಿಸಿತ್ತು. ಇದರ ಬೆನ್ನಲ್ಲೇ ಗಂಗೆಯನ್ನು ಮಲಿನರಹಿತವಾಗಿ ಇರಿಸುವ ಉದ್ದೇಶದಿಂದ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಚಿಂತನೆ ನಡೆಸಿರುವ ಪ್ರಕಾರ ಇನ್ನು ಮುಂದೆ ಗಂಗೆಯನ್ನು ಮಲಿನ ಮಾಡುವವರಿಗೆ ರೂ.100 ಕೋಟಿ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಪ್ರಸ್ತಾವವನ್ನು ಕೇಂದ್ರ ಸರ್ಕಾರದಿಂದ ನೇಮಕಕೊಂಡ ಸಮಿತಿ ಸಿದ್ಧಪಡಿಸಿದೆ. 'ರಾಷ್ಟ್ರೀಯ ಗಂಗಾ ನದಿ ಮಸೂದೆ -2017' ಮಂಡಿಸಲ್ಪಟ್ಟರೆ,  ನದಿ ಒಂದರ ಮೇಲೆ ತರಲಾಗುತ್ತಿರುವ ದೇಶದ ಮೊದಲ ವಿಧೇಯಕ ಇದಾಗಲಿದೆ. ಈ ಕರಡು ಮಸೂದೆ ಅನ್ವಯ, ಗಂಗೆಯನ್ನು ಮಲಿಗೊಳಿಸಿದರೆ, ಅದರ ಹರಿವು ತಡೆಗಟ್ಟಿದರೆ, ತಟದಲ್ಲಿ ಮರಳು ಗಣಿಗಾರಿಕೆ ನಡೆಸಿದರೆ, ನದಿ ಜಾಗವನ್ನು ಒತ್ತುವರಿ ಮಾಡಿ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದವರಿಗೆ 7 ವರ್ಷ ಜೈಲು ಹಾಗೂ ರೂ.100 ಕೋಟಿವರೆಗೆ ದಂಡ ವಿಧಿಸಬಹುದಾಗಿರುತ್ತದೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ