ಬಿಜೆಪಿಗೆ ವರವಾದ ಅತೃಪ್ತರ ಅನರ್ಹತೆ

Karnataka Government Crisis

29-07-2019

ಅತೃಪ್ತ 17 ಮಂದಿ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ವಿಶ್ವಾಸಮತಯಾಚನೆಗೆ ವರವಾಗಲಿದೆ. 17 ಮಂದಿ ಅನರ್ಹತೆಯೊಂದಿಗೆ 225 ಸದಸ್ಯಬಲದ ರಾಜ್ಯ ವಿಧಾನಸಭೆಯ ಶಾಸಕರ ಸಂಖ್ಯೆ 208ಕ್ಕೆ ಕುಸಿದಿದೆ. ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಹೊಂದಿರುವ ಬಿಜೆಪಿ ಬಲ 106 ಇದೆ. ಸದ್ಯ ಮ್ಯಾಜಿಕ್ ಸಂಖ್ಯೆ 105 ಆಗಿರುವುದರಿಂದ ವಿಶ್ವಾಸಮತ ಪಡೆಯಲು ಬಿಜೆಪಿಗೆ ಸಾಧ್ಯವಾಗುತ್ತದೆ.

ಸ್ಪೀಕರ್ ತೀರ್ಪಿನಿಂದ ರೆಬೆಲ್ ಗಳ ಭವಿಷ್ಯ ಅತಂತ್ರವಾದರೂ ಬಿಜೆಪಿಗಿದು ವರವಾಗಲಿದೆ. ಈ ಮಧ್ಯೆ ಅನರ್ಹಗೊಂಡ ರೆಬೆಲ್ ಶಾಸಕರು ಇಂದೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BJP Trust Vote Karnataka Government BS Yediyurappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ