ಬಿ ಎಸ್ ಯಡಿಯೂರಪ್ಪ ನಡೆದು ಬಂದ ಹಾದಿ

BS Yediyurappa

26-07-2019

ಶಿಕಾರಿಪುರ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವ ಒಂದು ಹೆಸರು ಅಂದ್ರೆ ಕರ್ನಾಟಕ ಕಂಡ ಧೀಮಂತ ನಾಯಕ ಹುಟ್ಟು ಹೋರಾಟಗಾರ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ.

ಶ್ರೀಯುತ ಸಿದ್ದಲಿಂಗಯ್ಯ ಹಾಗೂ ಶ್ರೀಮತಿ ಪುಟ್ಟ ತಾಯಮ್ಮನವರಿಗೆ 1943ರ ಫೆಬ್ರವರಿ 27ರಂದು ಜನಿಸಿದ ತಮ್ಮ  ಪುತ್ರ ಬಿಎಸ್ ಯಡಿಯೂರಪ್ಪನವರು ಈ ಉನ್ನತ ಮಟ್ಟದ ನಾಯಕ ಆಗುತ್ತಾರೆಂದು ಅವರು ಅಂದು ಊಹಿಸಿರಲಿಲ್ಲ. ಶ್ರೀಯುತರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಅವರ ತಾಯಿಯವರನ್ನು ಕಳೆದುಕೊಂಡರೂ ತಮ್ಮ ಗುರಿ ಸಾಧನೆಗೆ ಹಾಗೂ ಧ್ಯೇಯ ವಾದಕ್ಕೆ ಯಾವ ತೊಡಕೂ ಆಗಲಿಲ್ಲ.

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿ, 1965ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ ನಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಇದೇ ಅವರ ವೈವಾಹಿಕ ಜೀವನ ಪ್ರಾರಂಭವಾಗುವ ಸೇತುವೆಯಾಯಿತು. 1967ರಲ್ಲಿ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾದರು. 1972 ರಲ್ಲಿ ಇದೇ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.

ಪ್ರಾರಂಭಿಕ ದಿನಗಳ ಪ್ರಮುಖ ಹೋರಾಟಗಳು:

1975ರ ತುರ್ತು ಪರಿಸ್ಥಿತಿ 45 ದಿನಗಳ ಕಾಲ ಸೆರೆವಾಸ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ. ನಂತರ 1700ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿ ಗೊಳಿಸಿದರು. ಹಾಗೂ ಬಗರ್ ಹುಕುಂ ರೈತರ ಪರವಾಗಿ ಹೋರಾಟ. 1987 ರಲ್ಲಿ ಸೈಕಲ್ ಜಾಥಾ ಮುಖಾಂತರ ಶಿಕಾರಿಪುರ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತಂದರಲ್ಲದೇ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ಸಫಲರಾದರು.

 

ರಾಜಕೀಯ ಜೀವನದ ಮುಖ್ಯ ಘಟ್ಟಗಳು ಮತ್ತು ಬದುಕಿನ ಹೆಜ್ಜೆಗಳು

 

Ø 1972ರಲ್ಲಿ ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ನೇಮಕ.

Ø 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ.

Ø 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆ.

Ø 1980ರಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ.

Ø 1981ರಲ್ಲಿ ಜೀತದಾಳು ವಿಮುಕ್ತಿ ಹೋರಾಟದ ನಾಯಕತ್ವ ಪಾದಯಾತ್ರೆ.

Ø 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನ ಸಭೆಗೆ ಪ್ರವೇಶ.

Ø 1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.

Ø 1988ರಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

Ø 1988ರಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರು ವರೆಗೆ ರೈತ ಜಾಥಾ ಹಾಗೂ ಬನವಾಸಿಯಿಂದ ಬೆಂಗಳೂರು ವರೆಗೆ ರೈತ ಜಾಥಾದ ನೇತೃತ್ವ.

Ø 1991ರಲ್ಲಿ ಡಾ. ಮುರಳೀ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಭಾಗಿ. ಶ್ರೀನಗರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ.

Ø 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ.

Ø 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ.

Ø 1998 ತಲಕಾವೇರಿಯಿಂದ ಕೆ.ಆರ್.ಎಸ್ ವರೆಗೆ ರೈತ ಜಾಥಾ. 2000ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆ.

Ø 2003 ಬಗರ್ ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ.

Ø 2004ರಲ್ಲಿ 5ನೇ ಬಾರಿ ವಿಧಾನಸಭೆಗೆ ಪ್ರವೇಶ, ಪ್ರತಿಪಕ್ಷದ ನಾಯಕನಾಗಿ ಆಯ್ಕೆ.

Ø 2006 ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ.

Ø 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಜೆಡಿಎಸ್ ನಿಂದ ಅಧಿಕಾರ ನಿರಾಕರಣೆ.

Ø 2008 ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.

Ø 2011 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ. 2014 ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಪ್ರವೇಶ.

Ø 2014ರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ.

Ø 2016ರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನೇಮಕ.

2017 ನವಂಬರ್ 2ರಿಂದ 2018ರ ಜನವರಿ 28ರ ವರೆಗೆ "ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ". ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರವಾಸ.

Ø 2018ರಲ್ಲಿ ಮೇ 13ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.

Ø 2018ರಲ್ಲಿ ಮೇ 25ರಿಂದ 2019ರ ಜುಲೈ 25ರವರೆಗೆ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 104 ಸ್ಥಾನಗಳನ್ನು ಗೆಲ್ಲುವಂತೆ ಮುನ್ನೆಡೆಸಿದ ನೇತಾರ. ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದರೂ, ಅವಕಾಶವಾದಿ ರಾಜಕಾರಣವನ್ನೇ ಪಕ್ಷದ ಸಿದ್ಧಾಂತವನ್ನಾಗಿ ಅಳವಡಿಸಿಕೊಂಡಿರುವ ಜಾತ್ಯತೀತ ಜನತಾದಳದ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಜನರಿಗೆ ದ್ರೋಹ ಬಗೆಯಿತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶಕ್ಕೆ ಮೈತ್ರಿ ರಾಜಕಾರಣಕ್ಕೆ ಕೈ ಹಾಕಿದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಂದೇ ಒಂದು ದಿನವೂ ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸಲಿಲ್ಲ. ವಿಪಕ್ಷ ನಾಯಕರಾಗಿ ಶ್ರೀ ಯಡಿಯೂರಪ್ಪನವರು 14 ತಿಂಗಳ ಕಾಲ ರಾಜ್ಯದ ಸಮಸ್ಯೆಗಳಿಗೆ ಮೈತ್ರಿ ಸರ್ಕಾರಕ್ಕಿಂತಲೂ ಹೆಚ್ಚು ಸ್ಪಂದಿಸಿದರು. ಪರಿಣಾಮವಾಗಿ ಇಂದು ಮೈತ್ರಿ ಸರ್ಕಾರ ಪತನವಾಗಿದೆ. ಶ್ರೀ ಬಿ.ಎಸ್.ಯಡಿಯೂರಪ್ಪನವರು ಅವರು ಇದೀಗ 4ನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದಾರೆ.

 

ಶ್ರೀ ಬಿ.ಎಸ್.ವೈ ಸರ್ಕಾರದ ಪ್ರಮುಖ ಸಾಧನೆಗಳು

2008-2011 ಇವರ ಅಧಿಕಾರಾವಧಿಯಲ್ಲಿ ಅನೇಕ ಸುಧಾರಣೆ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.

2008ರಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ. ರಾಜ್ಯದಲ್ಲಿ ಮೊದಲ ಬಾರಿಗೆ 0% (ಶೂನ್ಯ ಬಡ್ಡಿ) ದರದಲ್ಲಿ ರೈತರ ಕೃಷಿ ಸಾಲ ಯೋಜನೆ ಜಾರಿ.

ಸಾವಯವ ಕೃಷಿ ಯೋಜನೆ ರೂ 10.05 ಕೋಟಿ ವಿನಿಯೋಗ 83000 ರೈತರನ್ನು ಇದರಲ್ಲಿ ತೊಡಗುವಂತೆ ಮಾಡಿ 76000 ಹೆಕ್ಟರ್ ಭೂಮಿಯಲ್ಲಿ ಇದನ್ನು ಜಾರಿಗೊಳಿಸಲಾಯಿತು.

ಸುವರ್ಣ ಭೂಮಿ ಯೋಜನೆಯಲ್ಲಿ ಹತ್ತು ಲಕ್ಷ ರೈತರ ಕುಟುಂಬಕ್ಕೆ ಅನುಕೂಲವಾಗುವಂತೆ ಅವರ ಜೀವನಮಟ್ಟ ಉತ್ತಮವಾಗುವಂತೆ ಮಾಡುವಲ್ಲಿ ಸಫಲವಾಯಿತು.

ಭಾಗ್ಯಲಕ್ಷ್ಮಿ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಈ ಯೋಜನೆಯಡಿ ಅವರ ಜೀವನಮಟ್ಟ ಸುಧಾರಣೆಗೆ ಕ್ರಮ. ಹತ್ತು ಲಕ್ಷ ಹದಿನೆಂಟು ಸಾವಿರ ಬಾಂಡ್ಸ್ ಅನ್ನು ವಿತರಿಸಲಾಯಿತು. 1376 ಕೋಟಿ ಹಣವನ್ನುಇದರಲ್ಲಿ ವಿನಿಯೋಗಿಸಲಾಯಿತು.

ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಕಡು ಬಡವರಿಗೆ ರೂ 400 ಮಾಸಿಕ ಪಿಂಚಣಿ ದೊರಕುವಂತೆ ಅನುಷ್ಠಾನ. 13.79 ಲಕ್ಷಜನ ಇದರ ಲಾಭವನ್ನು ಪಡೆಯುವಂತಾಯಿತು.

ಸೈಕಲ್ ವಿತರಣೆ ಯೋಜನೆ ಸರ್ಕಾರಿ ಹಾಗೂ ಅನುದಾನಿತ ಸರ್ಕಾರೇತರ ಎಂಟನೇ ತರಗತಿ ಶಾಲಾ ಮಕ್ಕಳಿಗೆ ಸೈಕಲ್ ಗಳನ್ನು ವಿತರಿಸಲಾಯಿತು. 125ಕೋಟಿ ರೂ ಹಣವನ್ನು ಇದಕ್ಕಾಗಿ ವೆಚ್ಚ ಮಾಡಲಾಯಿತು. ಸುಮಾರು ಏಳು ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.

ಆರೋಗ್ಯ ಕವಚ ಯೋಜನೆಯಡಿ ತುರ್ತು ಸೇವೆಯ ವಾಹನಗಳನ್ನು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಯಿತು ರು ನಲವತ್ತು ಕೋಟಿಯನ್ನು ಈ ಯೋಜನೆಗೆ ತೊಡಗಿಸಲಾಯಿತು.

2008 ರಿಂದ ಎರಡು 2015 ವರೆಗೆ 38ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದಿದ್ದಾರೆ ಇದರಲ್ಲಿ 41% ಗರ್ಭಿಣಿ ಸ್ತ್ರೀಯರಿಗೆ ಅನುಕೂಲವಾಗಿದೆ.

ಹಳ್ಳಿಗಳ ಸುಧಾರಣೆ ಯೋಜನೆಯಡಿ ರೂ4,385 ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಡಲಾಯಿತು.ಇದರಡಿ ನವ ರಸ್ತೆಗಳ ನಿರ್ಮಾಣ, ಸುಧಾರಣೆ, ಕುಡಿಯುವ ನೀರು ,ಒಳಚರಂಡಿ, ವಿದ್ಯುತ್ ಶಕ್ತಿ, ಶೌಚಾಲಯ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಯಿತು.

 


ಸಂಬಂಧಿತ ಟ್ಯಾಗ್ಗಳು

BS Yediyurappa Shivmogga Politician Shikharipura


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ