‘ಚಂದ್ರಗ್ರಹದಲ್ಲಿ ಕೋಣೆ ಕಾಯ್ದಿರಿಸಿ’ ಅಂದವರ್ಯಾರು ಗೊತ್ತ?

Adooru Gopalkrishnan statement

26-07-2019

ತಿರುವನಂತಪುರ: ಅನ್ಯಗ್ರಹಕ್ಕೆ ಹೋಗಿ ನೆಲೆಸುವಂತೆ ಬಿಜೆಪಿ ಸ್ನೇಹಿತರು ನೀಡಿರುವ ಸಲಹೆ ಉತ್ತಮವಾಗಿದೆ. ನನಗೆ ಚಂದ್ರಗ್ರಹಕ್ಕೆ ಒಂದು ಟಿಕೆಟ್ ಮತ್ತು ಅಲ್ಲಿ ನನಗಾಗಿ ಒಂದು ಕೋಣೆಯನ್ನು ಕಾಯ್ದಿರಿಸಿದರೆ ನಾನು ಅಲ್ಲಿಗೆ ಹೋಗಿ ನೆಲೆಸುತ್ತೇನೆ ಎಂದು ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಹೇಳಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ 49 ಸೆಲೆಬ್ರಿಟಿಗಳು ದೇಶದಲ್ಲಿ ಹೆಚ್ಚುತ್ತಿರುವು ಗುಂಪು ಹಲ್ಲೆಗಳನ್ನು ತಡೆಯಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಗೋಪಾಲಕೃಷ್ಣನ್ ಕೂಡ ಸಹಿ ಹಾಕಿದ್ದರು.

ಈ ಹಿನ್ನೆಲೆಯಲ್ಲಿ ಜೈ ಶ್ರೀರಾಮ್ ಎಂದು ಕೇಳಲು ಸಾಧ್ಯವಿಲ್ಲ ಎಂದರೆ ನೀವು ಅನ್ಯಗ್ರಹಕ್ಕೆ ಹೋಗಿ ಎಂದು ನಿನ್ನೆ ಕೇರಳ ಬಿಜೆಪಿ ರಾಜ್ಯ ಘಟಕದ ವಕ್ತಾರ ಬಿ.ಗೋಪಾಲಕೃಷ್ಣನ್ ಹೇಳಿದ್ದರು. ಇದಕ್ಕೆ ಅಡೂರ್ ಗೋಪಾಲಕೃಷ್ಣನ್ ಪ್ರತ್ಯುತ್ತರ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Adooru Gopalkrishnan Moon Film Director Celebrities


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ