‘ಅಲ್ಪಮತದ ಬಿಜೆಪಿ ಸರ್ಕಾರಕ್ಕೆ ಅವಕಾಶ ನೀಡಿದ್ದು ಯಾಕೆ’

V S Ugrappa Statement

26-07-2019

ಬೆಂಗಳೂರು: 112 ಶಾಸಕರ ಬೆಂಬಲ ಇದ್ದಾಗ ಮಾತ್ರ, ರಾಜ್ಯಪಾಲರು ಸರ್ಕಾರ ರಚನೆಗೆ ಕರೆಯುವುದು ಪದ್ಧತಿ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹೇಳಿದರು. ಈಗ ಸದನದ ಸದಸ್ಯ ಬಲ 222. ಬಹುಮತಕ್ಕೆ 112 ಶಾಸಕರ ಬೆಂಬಲದ ಅಗತ್ಯವಿದೆ. 105 ಜನ ಸದಸ್ಯರಿರುವ ಅಲ್ಪಮತದ ಬಿಜೆಪಿಗೆ ರಾಜ್ಯಪಾಲರು ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಇಂಥ ಸಮಯದಲ್ಲಿ ಬಿಎಸ್‍ವೈ ಅವರು ಕುದುರೆ ವ್ಯಾಪಾರದ ಮೂಲಕ ಮಾತ್ರ ಸದನದಲ್ಲಿ ಬಹುಮತ ಸಾಬೀತುಪಡಿಸಬಹುದು ಎಂದರು.

ವಾಮ ಮಾರ್ಗದ ಮೂಲಕ ಶಾಸಕರ ರಾಜೀನಾಮೆ ಕೊಡಿಸಿದ್ದಾರೆ. ಸುಮಾರು 1000 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ವಿಧಾನಸಭೆಯಲ್ಲಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಲಾಯಿತು ಆಗ ಬಿಜೆಪಿಯವರು ಸುಮ್ಮನಿದ್ದರು ಎಂದು ಅವರು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

V S Ugrappa BJP Congress Karnataka Crisis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ