ಭಾರತೀಯ ಸೇನೆಯಲ್ಲಿ ಸಿಬ್ಬಂದಿ ಕೊರತೆ!

Indian Army

26-07-2019

ನವದೆಹಲಿ, ಜು. 26- ವಾಯುಸೇನೆ, ನೌಕಾಸೇನೆ ಸೇರಿದಂತೆ ಭಾರತದ ಸೇನೆಯಲ್ಲಿ ಸಿಬ್ಬಂದಿಯ ಕೊರತೆ ಎದುರಾಗಿದೆ. ಸೇನೆಯು 9,427 ಅಧಿಕಾರಿವರ್ಗ ಹಾಗೂ 68,864 ಯೋಧರ ಕೊರತೆಯನ್ನು ಎದುರಿಸುತ್ತಿದೆ. ಕಳೆದ 2019ರ ಜನವರಿ ಮಾಹಿತಿಯನ್ವಯ ಸೇನೆಯ ಒಟ್ಟು ಅಧಿಕಾರಿಗಳ ಸಂಖ್ಯೆ 50,332. ಆದರೆ, ಪ್ರಸ್ತುತ ಅಧಿಕಾರಿಗಳ ಸಂಖ್ಯೆ 42,913 ಇದ್ದು, 7,399 ಅಧಿಕಾರಿಗಳ ಕೊರತೆ ಭಾರತೀಯ ಸೇನೆಯಲ್ಲಿದೆ.

ನೌಕಾದಳದ ಅಧಿಕೃತ ಅಧಿಕಾರಿಗಳ ಸಂಖ್ಯೆ 11,557. ಆದರೆ, ಪ್ರಸ್ತುತ ಅಧಿಕಾರಿಗಳ ಸಂಖ್ಯೆ 10,012 ಇರುವುದರಿಂದ 1545 ಅಧಿಕಾರಿಗಳ ಕೊರತೆಯನ್ನು ಸೇನೆ ಎದುರಿಸುತ್ತಿದೆ. ವಾಯುಸೇನೆಯ ಅಧಿಕೃತ ಅಧಿಕಾರಿಗಳ ಸಂಖ್ಯೆ 12,625. ಆದರೆ, ಪ್ರಸ್ತುತ 12,142 ಅಧಿಕಾರಿಗಳಿದ್ದು, ಒಟ್ಟು 483 ಅಧಿಕಾರಿಗಳ ಕೊರತೆಯನ್ನು ವಾಯುಸೇನೆ ಎದುರಿಸುತ್ತಿದೆ.

ಭಾರತದ ಸಶಸ್ತ್ರ ಪಡೆಗಳಾದ ನೌಕಾಸೇನೆ ಹಾಗೂ ವಾಯುಸೇನೆ ಒಟ್ಟು 9,427, ಅಧಿಕಾರಿಗಳು 68,864 ಯೋಧರ ಕೊರತೆಯಾಗಿರುವ ಮಾಹಿತಿಯಲ್ಲಿ ಸೇನೆಯ ವೈದ್ಯಕೀಯ ವಲಯ, ದಂತ ವೈದ್ಯಕೀಯ ವಲಯ ಹಾಗೂ ಸೇನಾ ಶುಶ್ರೂಷ ವಿಭಾಗದಲ್ಲಿನ ಮಾಹಿತಿ ಹೊರತುಪಡಿಸಿ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಭೂಸೇನೆ, ವಾಯುಸೇನೆ, ನೌಕಾಸೇನೆಗಳ ಕುರಿತಂತೆ ಪ್ರಸ್ತುತ ಮಾಹಿತಿಯನ್ವಯ ಅಧಿಕಾರಿಗಳ ಕೆಳ ಹಂತದ ವಾಯುಪಡೆ ಸಿಬ್ಬಂದಿ, ಅಧಿಕೃತ ಸಂಖ್ಯೆ 12,23,381 ಇರಬೇಕು. ಆದರೆ, ಪ್ರಸ್ತುತ ಯೋಧರ ಸಂಖ್ಯೆ 11,85,146 ಇದ್ದು, 38,235 ಯೋಧರ ಕೊರತೆಯನ್ನು ಸೇನೆ ಎದುರಿಸುತ್ತಿದೆ.

ನೌಕಾಸೇನೆಯ ಅಧಿಕೃತ ಯೋಧರ ಸಂಖ್ಯೆ 74,046, ಪ್ರಸ್ತುತ ಇರುವ ನೌಕಾಸೇನೆಯ ಬಲ 57,241 ಇದ್ದು, 16,806 ಸಿಬ್ಬಂದಿ ಕೊರತೆಯನ್ನು ನೌಕಾಸೇನೆ ಎದುರಿಸುತ್ತಿದೆ. ವಾಯು ಸೇನೆಯ ಅಧಿಕೃತ ಸಿಬ್ಬಂದಿ ಸಂಖ್ಯೆ 1,42,917, ಪ್ರಸ್ತುತ 1.29,094 ಯೋಧರಿದ್ದು, 13,382 ಸಿಬ್ಬಂದಿ ಕೊರತೆಯನ್ನು ವಾಯುಸೇನೆ ಎದುರಿಸುತ್ತಿದೆ.

ಪ್ರಾದೇಶಿಕ ಸೇನೆ ವಿಭಾಗ ನಾಗರಿಕರಿಗೆ ಸೇನೆಯಲ್ಲಿ ಹೆಚ್ಚು ಅವಕಾಶ ನೀಡಿದ್ದು, ಈ ಮೂಲಕ ದೇಶಸೇವೆಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಸೇನೆ ಹಾಗೂ ನಾಗರಿಕ ಸೇವಾ ಪ್ರಾಧಿಕಾರ ದೇಶದಲ್ಲಿನ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಭಾಗಿಯಾಗಬೇಕಿದೆ. ನಾಗರಿಕರನ್ನು ಪ್ರಾಣಾಪಾಯದಿಂದ ಕಾಪಾಡುವ ಸಂದರ್ಭಗಳಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕಾಗುತ್ತದೆ. ಉಳಿದಂತೆ ಅವಶ್ಯಕ ಸಂದರ್ಭಗಳಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕಿದೆ.

ಪ್ರಾದೇಶಿಕ ಸೇನಾ ವಿಭಾಗ ಇಲಾಖೆಯೇತರ, ಇಲಾಖೆಯ ಘಟಕಗಳನ್ನು ಹೊಂದಿದ್ದು, ಇಲಾಖೆಯೇತರ ವಿಭಾಗ ಕಾಲಾಳುಪಡೆ ಹಾಗೂ ಇಂಜಿನಿಯರ್ ವಿಭಾಗವನ್ನು ಒಳಗೊಂಡಿದೆ.

ಇಲಾಖೆ ಘಟಕಗಳು ನಾಗರಿಕ ಘಟಕಗಳನ್ನೊಳಗೊಂಡಿದ್ದು, ಸಚಿವಾಲಯ ಘಟಕ ರೈಲ್ವೆ, ಇಂಧನ ವಿಭಾಗ ಹಾಗೂ ಪರಿಸರ ಕಾರ್ಯಾಚರಣೆಯನ್ನು ಅವಲಂಬಿಸಿದೆ. ಪ್ರಾದೇಶಿಕ ಸೇನೆಯ ಒಟ್ಟು 65 ಘಟಕಗಳನ್ನು ಹೊಂದಿದ್ದು, ಅವುಗಳಲ್ಲಿ 6 ಬೆಟಾಲಿಯನ್‍ಗಳಿವೆ. ಇವುಗಳಲ್ಲಿ ಒಟ್ಟು 43,085 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

AirForce Solders Navy Indian Army


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ