ನಾವು ಅತೃಪ್ತರಲ್ಲ ಅಸಹಾಯಕರು:ಶಿವರಾಂ ಹೆಬ್ಬಾರ್

Shivaram Hebbar Statement

25-07-2019

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಹೊರತು ಕಾಂಗ್ರೆಸ್ ಪಕ್ಷಕ್ಕಲ್ಲ ಈಗಲೂ ನಾವು ಕಾಂಗ್ರೆಸ್ಸಿಗರೆ ಎಂದು ರಾಜಿನಾಮೆ ನೀಡಿರುವ ಶಾಸಕ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅತೃಪ್ತ ಶಾಸಕರಲ್ಲ. ಅಸಹಾಯಕ ಶಾಸಕರು. ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ಪೀಕರ್ ನಮ್ಮ ರಾಜೀನಾಮೆ ಅಂಗೀಕಾರ ಮಾಡುವ ವಿಶ್ವಾಸವಿದೆ ಎಂದು ಹೇಳಿದರ.
ನಮಗೆ ಈಗಲೂ ಸಿದ್ದರಾಮಯ್ಯ ಅವರೇ ನಾಯಕರು. ಕಾಂಗ್ರೆಸ್ ಬಿಡುವ ತನಕ ಕಾಂಗ್ರೆಸಿಗರೇ ನಮ್ಮ ನಾಯಕರು. ಸಾಕಷ್ಟು ದೂರ ಹೋದ ಮೇಲೆ ಸಿದ್ದರಾಮಯ್ಯ ನಮ್ಮನ್ನು ಕರೆದಿದ್ದಾರೆ. ಮೊದಲೇ ಕರೆದಿದ್ದರೆ ಯೋಚಿಸಬಹುದಿತ್ತು ಎಂದರು.
ಈಗ ಯಾವ ಪ್ರಯೋಜನವಿಲ್ಲ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿರುವುದನ್ನು ಗಮನಿಸಿದ್ದೇವೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು. ರಾಜೀನಾಮೆ‌ ನೀಡಿರುವ ಎಲ್ಲ ಶಾಸಕರು ಅನುಭವಿಗಳು. ನಮ್ಮ ನಿರ್ಧಾರ ದಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷೇತ್ರದ ಜನರ ಕ್ಷಮೆಯಾಚಿಸುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Shivaram Hebbar Congress Siddaramaiah Rebel MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ