ಉತ್ತರ ಕೊರಿಯಾದಿಂದ ದಾಳಿ ಆರೋಪ

South Korea says North Korea has fired two projectiles into the sea

25-07-2019

ಸಿಯೋಲ್: ಉತ್ತರ ಕೊರಿಯಾ ಎರಡು ಪತ್ತೆ ಮಾಡಲಾಗದ ಕ್ಷಿಪಣಿಗಳನ್ನು ಹೋಲುವ ಎರಡು ಸ್ಫೋಟಕಗಳನ್ನು ಸಮುದ್ರದಲ್ಲಿ ಸ್ಫೋಟಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ವೊನ್ಸಾನ್ ನಗರದ ಪೂರ್ವದಿಂದ 430 ಕಿಮೀ ದೂರದಿಂದ ಸ್ಫೋಟಕಗಳನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಈ ದಾಳಿ ನಡೆದಿರುವುದು ನಿಜವಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿಯ ನಂತರ ನಡೆದ ಮೊದಲ ದಾಳಿಯಾಗುತ್ತದೆ. ಭೇಟಿ ವೇಳೆ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳು ಸೇನಾ ವಿಸ್ತರಣೆಗೆ ಕಡಿವಾಣ ಹಾಕುವ ಕುರಿತು ಉಭಯ ನಾಯಕರು ಚರ್ಚಿಸಿದ್ದರು. ಆದರೆ, ಇದೀಗ ಮತ್ತೊಮ್ಮೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

North Korea America South Korea Donald Trump


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ