ಸರ್ಕಾರ ರಚನೆಗೆ ಆತುರ ಬೇಡ ಎಂದ ಹೈಕಮಾಂಡ್

Jagadish Shettar Statement

25-07-2019

ದೆಹಲಿ: ಕರ್ನಾಟಕದ ರಾಜಕೀಯ ಪರಿಸ್ಥಿತಿ ಮತ್ತು ಸರ್ಕಾರ ರಚಿಸುವ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಿರುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ದೆಹಲಿಗೆ ಶಾಸಕರಾದ ಮಾಧುಸ್ವಾಮಿ, ಅರವಿಂದ ಲಿಂಬಾವಳಿ ಮತ್ತಿತರ ನಾಯಕರ ಜೊತೆ ತೆರಳಿದ್ದ ಅವರು, ಭೇಟಿ ನಂತರ ಪ್ರತಿಕ್ರಿಯಿಸಿದ ರೀತಿಯಿಂದಲೇ, ಸರ್ಕಾರ ರಚನೆಗೆ ಹೈಕಮಾಂಡ್‍ನಿಂದ ಇನ್ನೂ ಸ್ಪಷ್ಟ ಸೂಚನೆ ಸಿಕ್ಕಿಲ್ಲ ಎನ್ನುವುದನ್ನು ಖಚಿತವಾಗಿದೆ. ಜೊತೆಗೆ ಮತ್ತೆ ಮಧ್ಯಾಹ್ನ ಭೇಟಿಯಾಗುವ ಸಾಧ್ಯತೆ ಇದೆ.

ಈ ನಡುವೆ ಸಂಸದೀಯ ಸಭೆ ಸೇರಿ ನಾವು ನಿರ್ಧರಿಸಿ, ನಿಮಗೆ ನಿರ್ದೇಶನ ನೀಡುತ್ತೇವೆ. ಅಲ್ಲಿಯವರೆಗೂ ಕಾಯಿರಿ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆಯ ಕಗ್ಗಂಟು ಇನ್ನೂ ಮುಂದುವರೆದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

BJP Karnataka Government High command Jagadish Shettar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ