ಪಾಕ್ ಉಗ್ರರ ತವರೆಂದು ತಪ್ಪೊಪ್ಪಿಕೊಂಡ ಇಮ್ರಾನ್ ಖಾನ್

Imran Khan statement

25-07-2019

ಕೊನೆಗೂ ಪಾಕಿಸ್ತಾನ ತಾನು ಉಗ್ರರ ತವರು ಎಂದು ತಪ್ಪೊಪ್ಪಿಕೊಂಡಿದೆ. ಇದನ್ನು ಸ್ವತಃ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೇ ಒಪ್ಪಿಕೊಂಡಿದ್ದಾರೆ. ದೇಶದಲ್ಲಿ 40ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದ್ದವು. ಈಗಲೂ 40 ಸಾವಿರ ಉಗ್ರರಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈ ಸತ್ಯವನ್ನು ಇಡೀ ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು ಅಪಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೇ 19 ವರ್ಷಗಳಿಂದ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧವನ್ನು ಶಾಂತವಾಗಿ ಅಂತ್ಯಗೊಳಿಸುವುದು ಅಮೆರಿಕ ಹಾಗೂ ಇತರ ದೇಶಗಳಿಗೆ ಬಿಟ್ಟದ್ದು ಎಂದು ಇಮ್ರಾನ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pakistan America Imran Khan Terrorist


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ