ಪಕ್ಷೇತರ ಶಾಸಕರ ಅರ್ಜಿ ಮುಂದೂಡಿಕೆ

Independent MLA

24-07-2019

ಬೆಂಗಳೂರು: ವಿಶ್ವಾಸ ಮತ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಲು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೆ ಸೂಚನೆ ನೀಡುವಂತೆ ಕೋರಿ ಕರ್ನಾಟಕದ ಪಕ್ಷೇತರ ಶಾಸಕರಿಬ್ಬರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಿನ್ನೆ ರಾತ್ರಿ ಪತನಗೊಂಡ ಬೆಳವಣಿಗೆ ನಂತರ ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಬಯಸುವುದಾಗಿ ಆರ್.ಶಂಕರ್ ಮತ್ತು ಎಚ್.ನಾಗೇಶ್ ಸುಪ್ರೀಂಕೋರ್ಟ್‍ಗೆ ಇಂದು ಮನವಿ ಸಲ್ಲಿಸಿದರು.

ಆದರೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ವಾದಿ ಮತ್ತು ಪ್ರತಿವಾದಿಗಳ ಪರ ವಕೀಲರಾದ ಮುಕುಲ್ ರೊಹ್ಟಗಿ ಮತ್ತು ಮನು ಸಿಂಘ್ವಿ ಹಾಜರಿರಲಿಲ್ಲ. ಹೀಗಾಗಿ ಅವರ ಉಪಸ್ಥಿತಿ ನಂತರ ಈ ಪ್ರಕರಣದ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಲಾಯಿತು.


ಸಂಬಂಧಿತ ಟ್ಯಾಗ್ಗಳು

Supreme Court R Shankar Trust Vote H Nagesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ